ಎಲ್ಲರೊಳಗೊಂದಾಗು ªಮಾನವೀಯತೆ ಮೌಲ್ಯವಿಲ್ಲದ ಜೀವನ ನಿರರ್ಥಕ : ಶ್ರೀ ರಂಭಾಪುರಿ ಜಗದ್ಗುರುಗಳು
ಬೀದರ- ಜುಲೈ-27.ಉತ್ಕøಷ್ಟವಾದ ಮಾನವ ಜೀವನದ ಉನ್ನತಿಗೆ ನೀತಿ ಬೋಧನೆಗಳ ಅವಶ್ಯಕತೆಯಿದೆ. ಮಾನವೀಯತೆ ಮೌಲ್ಯವಿಲ್ಲದ ಜೀವನ ನಿರರ್ಥಕವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಕೊಳ್ಳಾರ ಕೆ. ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡುತ್ತಿದ್ದರು.
ಮನೆ ಕಟ್ಟಲು ಹಣ ಬೇಕು. ಮನಸ್ಸು ಕಟ್ಟಲು ಗುಣ ಬೇಕು. ಹಣದಿಂದ ಕಟ್ಟಿದ ಮನೆಯಲ್ಲಿ ಎಲ್ಲರೂ ಇರಬಹುದು. ಆದರೆ ಗುಣದಿಂದ ಕಟ್ಟಿದ ಮನೆಯಲ್ಲಿ ಯೋಗ್ಯರಷ್ಟೇ ನೆಲೆಸಿರುತ್ತಾರೆ ಎಂಬುದನ್ನು ಗಮನಿಸಬೇಕಾಗುತ್ತದೆ. ಆಕಾಶ ಎಷ್ಟೇ ವಿಶಾಲವಾಗಿದ್ದರೂ ನಕ್ಷತ್ರಕ್ಕೆ ಇರುವ ಬೆಲೆ ಆಕಾಶಕ್ಕಿಲ್ಲ. ಹಾಗೇ ಮನುಷ್ಯ ಎಷ್ಟೇ ಶ್ರೀಮಂತನಾಗಿದ್ದರೂ ಗುಣಕ್ಕೆ ಇರುವ ಬೆಲೆ ಹಣಕ್ಕೆ ಇಲ್ಲ. ಸಾಧನೆಯ ಏಣಿಯನ್ನು ಪ್ರತಿಭೆಯಿಂದ ಏರಬೇಕೇ ಹೊರತು ಅಡ್ಡ ಮಾರ್ಗದಿಂದಲ್ಲ. ಇಡೀ ಬ್ರಹ್ಮಾಂಡ ಬೆಳಗುವ ಸೂರ್ಯನಾಗದಿದ್ದರೂ ಚಿಂತೆಯಿಲ್ಲ. ಮನೆಯಲ್ಲಿ ಬೆಳಗುವ ಪುಟ್ಟ ಹಣತೆಯಾದರೂ ಆಗಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಶಿಕ್ಷಣ ಮತ್ತು ಸಂಸ್ಕಾರದ ಮೂಲಕ ಸುಖ ಶಾಂತಿ ನೆಮ್ಮದಿ ಪಡೆಯಬೇಕಾದ ಅವಶ್ಯಕತೆಯಿದೆ. ಪುಣ್ಯಾಶ್ರಮದಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮ ತಮಗೆ ಸಂತೃಪ್ತಿಯನ್ನು ಉಂಟು ಮಾಡಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಸಂಚಾಲಕ ಷಣ್ಮುಖಯ್ಯಸ್ವಾಮಿ ಮೊದಲ್ಗೊಂಡು ಎಲ್ಲ ಭಕ್ತ ಮಂಡಳಿಗೆ ಶುಭ ಹಾರೈಸುತ್ತೇವೆ ಎಂದರು.
ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ ಜೀವನದ ಮುಂದಿನ ಪುಟ ಏನಿದೆ ಎಂದು ತಿಳಿದು ನೋಡುವ ಶಕ್ತಿ ದೇವರಿಗೆ ಅಷ್ಟೇ ಗೊತ್ತು ಹೊರತು ಬೇರಾರಿಗೂ ಸಾಧ್ಯವಾಗದು. ಸಮಸ್ಯೆಗಳು ಬದುಕಿಗೆ ಅಡ್ಡಿ ಪಡಿಸುವ ತಡೆಗೋಡೆಗಳಲ್ಲ. ಸಾಗಬೇಕಾದ ಪಥದ ದಿಕ್ಸೂಚಿಗಳಾಗಿವೆ ಎಂದರು. ಏಳು ದಿನಗಳ ಶಿವಪೂಜಾ ತಪೋನುಷ್ಠಾನಗೈದ ತಮಲೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳಿಗೆ ರೇಶ್ಮೆ ಶಾಲು ಹೊದಿಸಿ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಹಳ್ಳಿಖೇಡ ಚಿಕ್ಕಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಉದೇಶಾಮೃತವನ್ನಿತ್ತರು.
ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ಬಿಚಗುಪ್ಪ ಗುರುಲಿಂಗ ಶಿವಾಚಾರ್ಯರು, ಸದಲಾಪುರ ಸಿದ್ಧಲಿಂಗ ಶಿವಾಚಾರ್ಯರು, ಡೊಂಗರಗಿ ಉದಯ ರಾಜೇಂದ್ರ ಶಿವಾಚಾರ್ಯರು, ಹೆಡಗಾಪುರ ಶಿವಲಿಂಗ ಶಿವಾಚಾರ್ಯರು, ನೌಬಾದ ಆಶ್ರಮದ ಡಾ.ರಾಜಶೇಖರ ಗೊರಟಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಡಾ|| ಗುರಮ್ಮ ಸಿದ್ಧಾರೆಡ್ಡಿ, ವೈಜನಾಥ ಕಮಠಾಣಿ, ಮಹೇಶ್ವರಸ್ವಾಮಿ, ಡಾ|| ಚಂದ್ರಕಾಂತ ಗುದಗೆ, ವೀರಶೆಟ್ಟಿ ಪಾಟೀಲ ನೌಬಾದ್, ಶಿವಶರಣಪ್ಪ ಸೀರಿ, ವೇ.ಷಣ್ಮುಖಸ್ವಾಮಿ, ಶಿವಕುಮಾರಸ್ವಾಮಿ ಆಗಮಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಇಷ್ಟಲಿಂಗ ಪೂಜಾ ನೆರವೇರಿಸಿ ಧರ್ಮ ಜಾಗೃತಿ ಸಮಾರಂಭ ನಡೆಯಲು ಅವಕಾಶ ಕೊಟ್ಟ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಸೇವಾ ಸಮಿತಿಯವರು ಗೌರವಿಸಿದರು. ಸಕಲ ಸದ್ಭಕ್ತರಿಗೂ ಅನ್ನ ದಾಸೋಹ ನೆರವೇರಿತು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಸೊಲ್ಕೂರ್ ಶ್ರೀಕಾಂತಸ್ವಾಮಿ ಇವರಿಂದ ನಿರೂಪಣೆ ನಡೆಯಿತು.