ಎಫ್‍ಪಿಎಐ ಬೀದರ ಶಾಖೆಯವತಿಯಿಂದ ಡಾ. ಪೂರ್ಣಿಮಾ ಜಿ. ಇವರಿಗೆಸನ್ಮಾನ
ಬೀದರ:ಆ.31: ಎಫ್‍ಪಿಎಐ ಬೀದರ ಶಾಖೆಯ ವತಿಯಿಂದ ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಎಫ್‍ಪಿಎಐ ಕೇಂದ್ರ ಕಛೇರಿಯ ಮಾಜಿ ಉಪಾಧ್ಯಕ್ಷರಾದ ಡಾ. ಪೂರ್ಣಿಮಾ ಜಿ. ಇವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಎಫ್‍ಪಿಎಐ ಬೀದರ ಶಾಖೆಯ ಅದ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಪಾಟೀಲ್, ಮಾಜಿ ಅಧ್ಯಕ್ಷರಾದ ಡಾ. ವಿಜಯಶ್ರೀ ಬಶೆಟ್ಟಿ, ಉಪಾಧ್ಯಕ್ಷರಾದ ಡಾ. ಸವಿತಾ ಚಾಕೋತೆ, ಕಾರ್ಯಕಾರಿಣಿ ಸಭೆಯ ಸದಸ್ಯರಾದ ಶ್ರೀ ಸುಬ್ರಮಣ್ಯ ಪ್ರಭು, ಸದಸ್ಯರಾದ ಶ್ರೀ ನಾಗರಾಜ ಕರ್ಪೂರ, ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಹಾಗೂ ಸಿಬ್ಬಂದಿವರ್ಗದವರು ಡಾ. ಪೂರ್ಣಿಮಾ ಜಿ. ಇವರಿಗೆ ಗೌರವಿಸಿ, ಸನ್ಮಾನಿಸಿದರು.