ಬೀದರ್

ಎಪಿಎಂಸಿ ಕಾರ್ಯದರ್ಶಿಯಿಂದ ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ತನಿಖೆಗೆ ಅಗ್ರಹ

ಬೀದರ: ಬೀದರ ಕೃಷಿ ಉತ್ಪನ್ನ ಮಾರುಕಟೆ ಕಾರ್ಯದರ್ಶಿಯಾದ ಶ್ರೀಮತಿ ಪರಮೇಶ್ವರಿ ಫುಲೇಕರ ಅವರು, ಇಲಾಖೆಯ ನಿರ್ದೇಶಕರು ಹೈಕೋರ್ಟ ನಿರ್ದೇಶನವನ್ನು ಗಾಳಿ ತೂರಿ ನಗರದ ಹಳ್ಳದಕೇರಿ ತರಕಾರಿ ಮಾರುಕಟ್ಟೆಯಲ್ಲಿರುವ ಮಳಿಗೆಗಳನ್ನು ತರಾತುರಿಯಲ್ಲಿ ಲೀಸ್ ಕಂ. ಸೇಲ್ ಒಪ್ಪಂದ ಮಾಡಿಕೊಟ್ಟಿರುತ್ತಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಮತ್ತು ಇದರಲ್ಲಿ ಭ್ರಷ್ಟಾಚಾರ ನಡೆದಿದ್ದನ್ನು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಶಿಂಧೆ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಹಳ್ಳದಕೇರಿ ಬಳಿ ಎಪಿಎಂಸಿಯಿಂದ ನಿರ್ಮಿಸಲಾಗಿರುವ ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ವ್ಯಾಪಾರಿಗಳಿಗೆ ಲೀಸ್ ಕಂ ಸೇಲ್ ಆಗ್ರಿಮೆಂಟ್ ಮಾಡಿಕೊಡುವಲ್ಲಿ ಭ್ರμÁ್ಟಚಾರ ನಡೆದಿದೆ. ಹಿರಿಯ ಅಧಿಕಾರಿಗಳ ಸ್ಪಷ್ಟ ಸೂಚನೆಯ ನಂತರವೂ ಎಪಿಎಂಸಿ ಕಾರ್ಯದರ್ಶಿ ಶ್ರೀಮತಿ ಪರಮೇಶ್ವರಿ ಅವರು ಮಳಿಗೆ ನೋಂದಣಿ ಮಾಡಿಕೊಟ್ಟಿದ್ದು, ಪ್ರತಿ ಮಳಿಗೆಗೆ ಲಕ್ಷಾಂತರ ರೂಪಾಯಿ ಲಂಚ ಪಡೆದಿರುವ ಅನುಮಾನ ಇದೆ ಎಂದಿದ್ದಾರೆ.
ನೊಂದಣಿ ಮಾಡಿಕೊಡುವಲ್ಲಿ ಹೈಕೋರ್ಟ ನಿರ್ದೇಶನ ಪಾಲಿಸಿಲ್ಲ. ನಿರ್ದೇಶಕರು ನಿರ್ದೇಶಕರ ಅನುಮೋದನೆ ಪಡೆದಿಲ್ಲ. ಹೀಗೆ ನಿಯಮ ಉಲ್ಲಂಘಿಸಿ, ಮಳಿಗೆ ನೋಂದಣಿ ಮಾಡಿಕೊಟ್ಟಿದ್ದು, ಭಾರಿ ಭ್ರμÁ್ಟಚಾರ ನಡೆದಿದೆ. ಕಾರ್ಯದರ್ಶಿ ಅವರನ್ನು ತಕ್ಷಣ ಅಮಾನತು ಮಾಡಬೇಕು ಮಳಿಗೆ ನೋಂದಣಿ ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಸರ್ಕಾರಕ್ಕೆ ಆಗಿರುವ ನಷ್ಟವನ್ನು ಸರ್ಕಾರಕ್ಕೆ ಪಾವತಿಸುವಲ್ಲಿ ನಿರ್ಲಕ್ಷ ತೋರಿದ್ದಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಸಾಯಿ ಸಿಂಧೆ ತಿಳಿಸಿದ್ದಾರೆ.
ಮಳಿಗೆಯ ಬಾಡಿಗೆ ವರ್ಷಕ್ಕೆ 13 ಲಕ್ಷ ನಿಗದಿ ಮಾಡಲಾಗಿತ್ತು. ಆರು ತಿಂಗಳಲ್ಲಿ ಮೊತ್ತ ಪಾವತಿಸಿ ನೊಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಆದೇಶ ಹೊರಡಿಸಲಾಗಿತ್ತು.…ಈ ಆದೇಶಕ್ಕೆ ವ್ಯಾಪಾರಿಗಳು ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರು. ಇದರ ವಿರುದ್ಧ ಎಪಿಎಂಸಿ ಮೇಲ್ಮನವಿ ಸಲ್ಲಿಸಿತ್ತು. ಆಗ ಹೈಕೋರ್ಟ್ ಈಗ ಒಂದು ಲಕ್ಷ ಹಣ ಕಟ್ಟಿ ಹಾಗೂ ಉಳಿದ ಹಣ ರೂ. 10 ಸಾವಿರ ದಂಡದೊಂದಿಗೆ ಐದು ತಿಂಗಳಲ್ಲಿ ಪಾವತಿಸಿ ಎಂದು ಸೂಚನೆ ನೀಡಿತ್ತು. ಆದರೆ ಎಪಿಎಂಸಿ ಕಾರ್ಯದರ್ಶಿ ದಂಡವೂ ವಸೂಲು ಮಾಡಲಿಲ್ಲ. ಬದಲಾಗಿ ಹೈಕೋರ್ಟ್ ಆದೇಶ ಗಾಳಿಗೆ ತೂರಿ ವ್ಯಾಪಾರಿಗಳಿಂದ ಲಂಚ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಅಖಿಲೇಶ ಸಾಗರ, ವಿಶಾಲ ದೊಡ್ಡಿ, ಅನೀಲಕುಮಾರ ಮಡ್ಡೆ, ಮಹೇಂದ್ರಕುಮಾರ ಹೊಸಮನಿ, ವಿನೋಧ ಶಿಂಧೆ, ಅನೀಲಕುಮಾರ ಸಾಂಗವಿ, ಸಂಗಮೇಶ ಭಾವಿದೊಡ್ಡಿ ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!