ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಲು ಸಚಿವರಲ್ಲಿ ಮನವಿ
ಬೀದರ್ ಜೂನ್. 15ಃ ನಗರದ ಹೈದ್ರಾಬಾದ ರಸ್ತೆಯಲ್ಲಿಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಹೊರ ಜಿಲ್ಲೆಗಳ ರೈತರ ತರಕಾರಿ ಮೊದಲು ಖರೀದಿಸುವ ಬದಲು ಜಿಲ್ಲೆಯ ರೈತರು ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ತರಕಾರಿಯನ್ನು ಪ್ರಥಮಾದ್ಯತೆಯಲ್ಲಿ ಖರೀದಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎ.ಪಿಎಂ.ಸಿ.)ಯ ಆಡಳಿತಾಧಿಕಾರಿಗಳಿಗೆ ಸೂಚಿಸಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಅರಣ್ಯ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಮತ್ತು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವರಾದ ರಹೀಂಖಾನ ಅವರಿಗೆ ಬರೆದ ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೀದರ ಎ.ಪಿ.ಎಂ.ಸಿ ಅಡಿಯಲ್ಲಿ ಹೈದ್ರಾಬಾದ ರಸ್ತೆಯಲ್ಲಿ ನಡೆಯುತ್ತಿರುವ ತರಕಾರಿ ಮಾರುಕಟ್ಟೆಯಲ್ಲಿ ದಲ್ಲಾಲಿಗಳ ಅಂಧಾ-ದುಂಧಾ ದರ್ಬಾರವನ್ನು ನಿಯಂತ್ರಣ ಮಾಡಲು ಎಪಿಎಂಸಿ ಆಡಳಿತಾಧಿಕಾರಿಗಳಿಗೆ ಉಭಯ ಸಚಿವರು ಸೂಚಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯ ರೈತರು ಬೆಳೆದ ತರಕಾರಿ ಪ್ರಥಮಾದ್ಯತೆಯಲ್ಲಿ ತರಕಾರಿ ಎಜೆಂಟರು ಖರೀದಿ ಮಾಡದ ಕಾರಣ ಜಿಲ್ಲೆಯ ಸ್ಥಳೀಯ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಈ ಮಾರುಕಟ್ಟೆಯಲ್ಲಿ ವಾಹನಗಳು ಅಡ್ಡಾ-ತಿಟ್ಟಿ ನಿಲ್ಲಿಸಿಸುವುದರಿಂದ ರೈತರು ಹಾಗೂ ವ್ಯಾಪಾರಸ್ಥರಿಗೆ ಭಾರಿ ಅಡಚಣೆಯಾಗುತ್ತಿದೆ. ಈ ಸಮಸ್ಯೆ ನಿವಾರಣೆಗಾಗಿ ಕೂಡಲೇ ಎಪಿಎಂಸಿ ವತಿಯಿಂದ ಸೆಕ್ಯೂರಿಟಿ ಗಾರ್ಡ ಅನ್ನು ನೇಮಿಸಬೇಕೆಂದು ಕೊರಿದ್ದಾರೆ.
ಬೀದರ ಎಪಿಎಂಸಿ ವತಿಯಿಂದ ಕರೆದ ಟೆಂಡರ್‍ನಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆ ಪಡೆದವರು ಬೇರೆಯೊಬ್ಬರಿಗೆ ಟೆಂಡರ್‍ಗಿಂತ ಹೆಚ್ಚಿನ ದರದಲ್ಲಿ ಮಳಿಗೆಯನ್ನು ಬಾಡಿಗೆ ನೀಡಿದ್ದಾರೆ. ಇಂತಹ ತರಕಾರಿ ಎಜೆಂಟರ ವಿರುದ್ಧ ಎ.ಪಿ.ಎಂ.ಸಿ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.