ಎನ್.ಎಸ್.ಪಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಬಯೋ ಮ್ಯಾಟ್ರಿಕ್ ಅಥೇಂಟಿಕೇಶನ್ ಮಾಡಿಸಲು ಅಗಸ್ಟ್ 31 ಕಡೆ ದಿನ
ಬೀದರ, ಅಗಸ್ಟ್ 29 – 2022-23ನೇ ಸಾಲಿನಲ್ಲಿ ರಾಷ್ಟಿçÃಯ ವಿದ್ಯಾರ್ಥಿವೇತ ಎನ್.ಎಸ್.ಪಿ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಎಚ್ಓಐ,ಐಎನ್ಓ ಇವರ ಸಮ್ಮುಖದಲ್ಲಿ ಬಯೋ ಮ್ಯಾಟ್ರಿಕ್ ಅಥೇಂಟಿಕೇಶನ್ ಕಾರ್ಯಕ್ರಮ ಈಗಾಗಲೆ ಚಾಲ್ತಿಯಲ್ಲಿದ್ದು, ಜಿಲ್ಲೆಯಾದ್ಯಂತ ಒಟ್ಟು 749 ಶಾಲಾ,ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಬಯೋ ಮ್ಯಾಟ್ರಿಕ್ ಅಥೇಂಟಿಕೇಶನ್ ಆಗಿರುವುದಿಲ್ಲ. ಹೀಗಾಗಿ ಸದರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾಗುತ್ತಿಲ್ಲ.
ಪ್ರಯುಕ್ತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ 9 ರಿಂದ 10ನೇ ತರಗತಿ ಹಾಗೂ ಮೆಟ್ರಿಕ್ ನಂತರದ ಶಿಕ್ಷಣ ಸಂಸ್ಥೆಯ ನೋಡಲ್ ಅಧಿಕಾರಿಗಳು (ಐಎನ್ಓ)ಶಾಲಾ ಮುಖ್ಯಸ್ಥರು (ಎಚ್ಓಐ)ಗಳು ತಮ್ಮ ವಿದ್ಯಾಕೇಂದ್ರಗಳಲ್ಲ್ಲಿ 2022-23ನೇ ಸಾಲಿನಲ್ಲಿ ರಾಷ್ಟಿçÃಯ ವಿದ್ಯಾರ್ಥಿವೇತನ ಎನ್ಎಸ್ಪಿಗೆ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಬಯೋ ಮ್ಯಾಟ್ರಿಕ್ ಅಥೇಂಟಿಕೇಶನ್ ಪ್ರಕ್ರಿಯೆಯನ್ನು ಸಿಎಸ್ಸಿ ಸೇಂಟರ್ ರವರಿಂದ ಕೈಗೊಳ್ಳಲಾಗುತ್ತಿದ್ದು, (ಒಂದುವೇಳೆ ವಿದ್ಯಾರ್ಥಿಗಳ ಬಯೋ ಮ್ಯಾಟ್ರಿಕ್ ಅಥೇಂಟಿಕೇಶನ್ ಪ್ರಕ್ರಿಯೆ ಕೈಗೊಳ್ಳದೇ ಇದ್ದಲ್ಲಿ ನಿಯಮಾನುಸಾರ ವಿದ್ಯಾರ್ಥಿವೇತನ ಮಂಜೂರಾಗುವುದಿಲ್ಲ.) ಸದರಿ ಬಯೋ ಮ್ಯಾಟ್ರಿಕ್ ಅಥೇಂಟಿಕೇಶನ್ ಪ್ರಕ್ರಿಯೆಯ ಕೊನೆಯ ದಿನಾಂಕವನ್ನು ಮುಂದೂಡಿ ಅಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ: ತಾಲೂಕ ವಿಸ್ತರಣಾಧಿಕಾರಿಗಳು ಶ್ರೀ ಉಮೇಶ:-9448844387, ಶ್ರೀಮತಿ ಲಕ್ಷಿö್ಮ ನಾಯಕ್-8296599031 ಶ್ರೀಮತಿ ಸವಿತಾ-8073144502, ಶ್ರೀ ಶಿವಕುಮಾರ ಕುಪ್ಪೆ-6361879744 ಮತ್ತು ಮಿಫ್ತಾವುದ್ದಿನ್ ಜಿಲ್ಲಾ ಕಛೇರಿ, 7411724266 ರವರಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು ಪ್ರಕರಟಣೆಯಲ್ಲಿ ತಿಳಿಸಿದ್ದಾರೆ.