ಈಶ್ವರ ಖಂಡ್ರೆಗೆ ಉಪಮುಖ್ಯ ಮಂತ್ರಿ ಸ್ಥಾನ ಅಗ್ರಹ
2024 ನೇಯ ಲೋಕ ಸಭೆಯ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ 9 ಸ್ಥಾನ ಜಯಭೆರಿಯಾಗಿದೆ ಅದರಲಿ 5 ಸ್ಥಾನ ಕಲ್ಯಾಣಕರ್ನಾಟಕದಿಂದಲೇ ಹೆಚ್ಚಿನ ಸ್ಥಾನಗಳು ಬಂದಿರುವದರಿಂದ ಕಲ್ಯಾಣ ಕರ್ನಾಟಕದ ಜನರು ಕಾಂಗ್ರೇಸ್ ಪಕ್ಷವನ್ನು ಎತ್ತಿಹಿಡಿಯುವಂತಹ ಕೆಲಸವನ್ನು ಮಾಡಿದ್ದಾರೆ. ಬೀದರ, ಕಲಬುರ್ಗಿ, ರಾಯಚೂರು, ಬಳ್ಳಾರಿ, ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಾಂಗ್ರೇಸ್ ಪಕ್ಷ ಗದ್ದಿರುವುದರಿಂದ ಸನ್ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆಗೆ ಬಹಳಷ್ಟು ಶ್ರಮವಹಿಸಿ ಐದು ಜನರಿಗೆ ಲೋಕಸಭೆಗೆ ಕಳಹಿಸಿದ್ದಾರೆ.
ಆದ್ದುದರಿಂದ ಸನ್ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆಗೆ ಉಪಮುಖ್ಯಮಂತ್ರಿ ಮಾಡಿ ಕಲ್ಯಾಣ ಕರ್ನಾಟಕದ ಹಿಂದೂಳಿದ ಭಾಗದ ಜನರಿಗೆ ನ್ಯಾಯನೀಡಿದಂತಾಗುತ್ತದೆ ಎಂದು ಕಾಂಗ್ರೇಸಿನ ಯುವಮುಖಂಡರಾದ ಶ್ರೀ ತಿಮಾಥಿ ಸೈಮನ್ ಇವರ ಬೇಡಿಕೆಯಾಗಿದೆ.