ಇಸ್ರೋ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಬೀದರ್ (ಆ.23): ಜಗತ್ತಿನ ಗಮನ ಸೆಳೆದಿದ್ದ ಬಹು ನಿರೀಕ್ಷಿತ ಚಂದ್ರಯಾನ – 3 ಯೋಜನೆ ಯಶಸ್ವಿಯಾಗಿದ್ದಕ್ಕೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹರ್ಷ ವ್ಯಕ್ತಪಡಿಸಿದ್ದಾರೆ.
‘ಚಂದ್ರಯಾನ – 3 ಎಂಬ ಯೋಜನೆಯ ಮೂಲಕ ‘ವಿಕ್ರಮ್ ಲ್ಯಾಂಡರ್’ ಎಂಬ ಉಪಗ್ರಹವನ್ನು ನಿರಂತರ ಪರಿಶ್ರಮದ, ಯಶಸ್ವಿ ಪ್ರಯತ್ನದ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಕಳುಹಿಸಿ ವಿನೂತನ ದಾಖಲೆ ಬರೆದ ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ಇಸ್ರೋಗೆ ಅಭಿನಂದನೆಗಳು.
ವಿನೂತನ ದಾಖಲೆಗೆ ಹಗಲಿರುಳು ಶ್ರಮಿಸಿದ ಇಸ್ರೋ ವಿಜ್ಞಾನಿಗಳಿಗೂ, ತಂತ್ರಜ್ಞರಿಗೂ, ಈ ಸಾಧನೆಗಾಗಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಶ್ರಮಿಸಿದ ಸರ್ವರಿಗೂ ಈ ಮೂಲಕ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇಸ್ರೋ ಸಂಸ್ಥೆಯ ಮುಂದಿನ ಅಧ್ಯಯನಕ್ಕೆ ಈ ಮೂಲಕ ಶುಭ ಹಾರೈಸುವೆ. ವಿನೂತನ ದಾಖಲೆ ಬರೆದ ಇಸ್ರೋಗೆ ಅಭಿನಂದನೆಗಳು’ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಬುಧವಾರ ಸಂಜೆ ಸಂತಸ ಹಂಚಿಕೊಂಡಿದ್ದಾರೆ.