ಬೀದರ್

ಡಿ.ಕೆ.ಶಿವಕುಮಾರರವರ ಹೇಳಿಕೆ ಕೇಂದ್ರ ಸಚಿವ ಭಗವಂತ ಖೂಬಾ ಪ್ರಶ್ನಿ

ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಕಾರಣ ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಸಾಧ್ಯವಿಲ್ಲವೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರವರ ಹೇಳಿಕೆ ಕಳಪೆ ಆಡಳಿತಕ್ಕೆ ಸಾಕ್ಷಿಯಾಗಿದೆ, ಮುಂದಾಲೋಚನೆಯಿಲ್ಲದೆ ರಾಜ್ಯದ ಹಿತಾಸಕ್ತಿ ಕಡೆ ಕಾಳಜಿ ವಹಿಸಿದೆ, ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ದಿಗೆ ತಿಲಾಂಜಲಿ ನೀಡಿದ್ದಾರೆ, ಇದಕ್ಕೆ ಪೂರಕವೆಂಬಂತೆ, ಡಿ.ಕೆ. ಶಿವಕುಮಾರ ಹೆಳಿದ್ದಾರೆ ಇದು ಇವರು ಸರ್ಕಾರ ನಡೆಸುವಾ ರೀತಿನಾ ಎಂದು ಕೇಂದ್ರ ಸಚಿವ ಭಗವಂತ ಖೂಬಾ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಅಭಿವೃದ್ದಿ ಕೆಲಸಗಳು ಆಗದೆ ಇದ್ದಲ್ಲಿ, ಜನರ ಜೀವನ ಶೈಲಿಯ ಮೇಲೆ ದೊಡ್ಡ ಹೊಡೆತ ಬಿಳಲಿದೆ, ನಿರುದ್ಯೋಗ ಸಮಸ್ಯೆ ಹೆಚ್ಚಲಿದೆ, ಶಿಕ್ಷಣ, ಆರೋಗ್ಯ ಇಲಾಖೆಯಂತಹ ಮುಂತಾದ ಇಲಾಖೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರಲಿದೆ, ಗ್ಯಾರಂಟಿಗಳ ಸೊಗಿನಲ್ಲಿ ಜನರಿಗೆ ಮಾಡುವ ಅನ್ಯಾಯವಲ್ಲವೇ ಎಂದು ಸಚಿವರು ರಾಜ್ಯ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದ ಅಭಿವೃದ್ದಿಗೆ ದುಡ್ಡಿಲ್ಲವೆಂದರೆ ಏನರ್ಥ, ಜೊತೆಗೆ ಅವರ ಪಕ್ಷದ ಶಾಸಕರುಗಳೆ ಅಭಿವೃದ್ದಿಗೆ ಅನುದಾನ ನೀಡಿ ಎಂದು ಈಗಾಗಲೆ ಒತ್ತಾಯ ಮಾಡಿದ್ದಾರೆ, ಆದರೂ ಇವರು ಅಭಿವೃದ್ದಿಗೆ ಅನುದಾನ ನೀಡುತ್ತಿಲ್ಲಾ, ಇವರ ಮನಸ್ಥಿತಿ ನೋಡಿದರೆ, ರಾಜ್ಯವನ್ನು ಎಲ್ಲಾ ರೀತಿಯಿಂದಲೂ ದಿವಾಳಿ ಮಾಡಲು ಹೊರಟಿದ್ದಾರೆ. ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಾ, ಕೇವಲ ಇವರ ಅಭಿವೃದ್ದಿ ಮಾಡಿಕೊಳ್ಳುತ್ತಿದ್ದಾರೆ.

60 ವರ್ಷ ದೇಶದ ಜನತೆಗೆ ಹೇಗೂ ವಂಚಿಸಿ ಅಧಿಕಾರ ನಡೆಸಿರುವುದು ಜನತೆ ನೋಡಿ, ಇಂದು ಕೇಂದ್ರದಲ್ಲಿ ಅಧಿಕಾರದಿಂದ ತುಂಬಾ ದೂರ ಇಟ್ಟಿದ್ದಾರೆ, ಇವಾಗ ರಾಜ್ಯದಲ್ಲಿ ಮತ್ತದೆ ಸುಳ್ಳು ಆಶ್ವಾಸನೆಗಳು ನೀಡಿ ಅಧಿಕಾರಕ್ಕೆ ಬಂದಿದ್ದಿರಿ, ಇವಾಗಲಾದರೂ ಎಲ್ಲಾ ರಂಗಗಳಲ್ಲಿ ಅಭಿವೃದ್ದಿ ಮಾಡಿ, ರಾಜ್ಯದ ಜನರಿಗೆ ನೆಮ್ಮದಿಯ ಜೀವನ ನಡೆಸುವಂತೆ ಮಾಡಿ ಎಂದು ಸಚಿವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನತೆ ಆರೋಗ್ಯದ ಕಾಳಜಿ ವಹಿಸಿಕೊಳ್ಳಬೇಕು, ವಿಶೇಷವಾಗಿ ಮಕ್ಕಳ ಆರೋಗ್ಯದ ಕಡೆ ಗಮನವಹಿಸಿ, ಸ್ವಚ್ಚತೆಗೆ ಅದ್ಯತೆ ನೀಡಿ, ಕಾಯಿಸಿ ಆರಿಸಿದ ನೀರು ಕುಡಿಯಿರಿ, ಬಿಸಿಯಾಗಿರುವ ಆಹಾರ ಸೇವನೆ ಇರಲಿ, ತಗ್ಗು ಪ್ರದೇಶ ಹಾಗೂ ನೀರಿನ ಹರಿವು ಹೆಚ್ಚಿರುವ ಕಡೆ ಜನತೆ ಹೊಗಬಾರದು, ನದಿ, ಹಳ್ಳಗಳಡೆ ಜನತೆ ಸದ್ಯ ಯಾವೂದೇ ಕಾರಣಕ್ಕೂ ಹೊಗಬೇಡಿ ಎಂದು ಕ್ಷೇತ್ರದ ಜನತೆಯಲ್ಲಿ ಸಚಿವರು ಮನವಿ ಮಾಡಿದ್ದಾರೆ.

Ghantepatrike kannada daily news Paper

Leave a Reply

error: Content is protected !!