ಬೀದರ್

ಆ.30ರಂದು ದ ರೂಲರ್ಸ್ ಚಲನಚಿತ್ರ ಬಿಡುಗಡೆ: ಡಾ.ಸಂದೇಶ

ಬೀದರ್:  ಈ ತಿಂಗಳ 30 ರಂದು ಬೀದರ್ ನ ಸಪ್ನಾ ಮಲ್ಟಿಪ್ಲೆಕ್ಸ್ ಅವರಣದಲ್ಲಿ ಹಾಗೂ ಭಾಲ್ಲಿಯ ಅಮರ ಚಿತ್ರಮಂದಿರದಲ್ಲಿ ಏಕ ಕಾಲಕ್ಕೆ ಶ್ರೀಮಂತ ಹುಡುಗರ ಮಿಥ್ಯ ಪ್ರೇಮ ಪಾಶಕ್ಕೆ ಬಲಿಯಾಗುತ್ತಿರುವ ಬಡ ಯುವತಿಯರ ದಯನಿಯ ಸ್ಥಿತಿ ಕುರಿತ ನೈಜ ಚಲನಚಿತ್ರ ದ ರೂಲರ್ಸ್ ಚಲನಚಿತ್ರ ಬಿಡುಗಡೆಯಾಗಲಿದೆ ಎಂದು ಚಲನಚಿತ್ರ ನಟ, ನಿರ್ದೇಶಕರು ಹಾಗೂ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಡಾ.ಕೆ.ಎಮ್ ಸಂದೇಶ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ  ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಸಪ್ಟೆಂಬರ್ 2023 ರಂದು ನಾನು ಈ ಚಿತ್ರದ ಕಥೆ ಬರೆಯಲಾಗಿತ್ತು. ನವೆಂಬರ್ 26ರಂದು ಸಂವಿಧಾನ ದಿನಾಚರಣೆ ದಿನದಂದು ಚಲನ ಚಿತ್ರದ ಶುಟಿಂಗ್ ಕಾರ್ಯ ಆರಂಭವಾಯಿತು. ಅದು ಈಗ ಪೂರ್ಣಗೊಂಡು ಬಿಡುಗಡೆಗೆ ರೆಡಿಯಾಗಿದೆ. ಸುಮಾರು ನಾಲ್ಕು ವರೆ ಕೋಟಿ ಖರ್ಚು ಮಾಡಿ ಚಿತ್ರ ನಿರ್ಮಾಣ ಮಾಡಲಾಗಿದೆ. ಅಶ್ವಥ್ ಬೆಳಗೆರೆ ಅವರು ಈ ಚಿತ್ರದ ನಿರ್ಮಾಪಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಚಿತ್ರದ ಶುಟಿಂಗ್ ನಡೆದಿದೆ. ರಿತುಗೌಡ ನಟಿಯಾಗಿ, ಅವರ ತಾಯಿ ದುರ್ಗಮ್ಮ ಸಹ ಅಭಿನಯಿಸಿದ್ದಾರೆ. ಉದಯ ಭಾಸ್ಕರ ಅವರು ನಿರ್ದೇಶಿಸಿ ನಮಗೆ ಪ್ರೋತ್ಸಾಹಿಸಿದ್ದಾರೆ ಎಂದರು.
ದ ರೂಲರ್ಸ್ ಚಿತ್ರದಲ್ಲಿ ಶ್ರೀಮಂತ ಯುವಜನರು ಬಡ ಯುವತಿಯರನ್ನು ಪ್ರೇಮ‌ ಪಾಶಕ್ಕೆ ಬೀಳಿಸಿ ಮೋಸ ವಂಚನೆ ಮಾಡುತ್ತಿರುವ ಹಿನ್ನಲೆಯಲ್ಲಿ ಬಡ ವಿದ್ಯಾವಂತ ಯುವತಿಯರು ಸುಳ್ಳು ಪ್ರೇಮಕ್ಕೆ ಬೀಳಬಾರದೆಂದು ಇದರಲ್ಲಿ ಜಾಗೃತಿ ಮೂಡಿಸಲಾಗಿದೆ. ಇದರ ಹೈಲೆಟ್ಸ್ ನ್ನು ಕೋಲಾರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ, ಮಾಜಿ ಸಚಿವರಾದ ಬಿ.ಸಿ ನಾಗೇಶ, ಮೋಟಮ್ಮ ನೋಡಿ ಕಣ್ಣಿರು ಸುರಿಸಿದರು. ಈ ಚಿತ್ರ ನೋಡಿ ಕನಿಷ್ಟ 50 ಸಾವಿರದಿಂದ 1 ಲಕ್ಷ ಯುವತಿಯರು ಮಿಥ್ಯ ಪ್ರೇಮ ಪಾಶದಿಂದ ಬಚಾವ ಆಗಬಹುದೆಂಬ ವಿಶ್ವಾಸ ನಮಗಿದೆ. ಹಾಗಾಗಿ ಈ ಚಿತ್ರದಲ್ಲಿ ನಾನು ನಟಿಸಿದಕ್ಕೂ ಸಾರ್ಥಕವಾಯಿತೆಂದು ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಮಹೇಶ ಗೋರನಾಳಕರ್, ಪ್ರಕಾಶ ರಾವಣ, ಮುಕೇಶ ಚಲವಾ, ಸಿದ್ಧಾರ್ಥ ನಾಟೇಕರ್, ಗೋಪಾಲ ದೊಡ್ಡಿ, ಭೀಮರಾವ, ಲೋಕೇಶ ಕಾಂಬಳೆ, ನೀಲೇಶ ಮೇಲಕೇರಿ, ಮುಕೇಶ ಪಾಂಡೆ, ಉದ್ದೇಶ ಸಿಂಗೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
Ghantepatrike kannada daily news Paper

Leave a Reply

error: Content is protected !!