ಆ.26 ರಂದು ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ
ಬೀದರ: ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ ಬೀದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಮಹೋತ್ಸವವನ್ನು ಚಿಕಪೇಟನ ರಿಂಗ್ ರೋಡ್ ಹತ್ತಿರದ ಶ್ರೀ ಜಗನ್ನಾಥ ಮಂದಿರ ನೀಲಾಚಲ ಧಾಮ್‌ನಲ್ಲಿ ದಿನಾಂಕ: 26-08-2024 ರಂದು ಸಂಜೆ 6.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ನೃತ್ಯ, ಭಜನೆ, ಮಹಾಪೂಜೆ, ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಿಕಿಂದ್ರಾಬಾದನ ಇಸ್ಕಾನ್ ಟೆಂಪಲ್‌ನ ಪ್ರಮುಖ ಸಾಧಕರಾದ ಹಾಗೂ ಅಲ್ಲಿನ ಎಚ್.ಸಿ.ಎಲ್ ಕಂಪನಿಯ ಖ್ಯಾತ ಇಂಜಿನೀಯರ್ ಆದ ಪೂಜ್ಯ ಶ್ರೀ ಕೃಷ್ಣ ಚೈತನ್ಯ ದಾಸ್ ಪ್ರಭುಜಿರವರ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು, ಶೃದ್ಧಾಲುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ ಬೀದರ ವತಿಯಿಂದ ಡಾ. ನಿಲೇಶ ದೇಶಮುಖ ಅವರು ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ