ಬೀದರ್

ಆ.21 ರಂದು ಬೃಹತ್ ಉದ್ಯೋಗ ಮೇಳ

ಬೀದರ. ಆಗಸ್ಟ್.17 – ಬೀದರ ಜಿಲ್ಲಾಡಳಿತ, ಸಂಜೀವಿನಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ, ಬೀದರ ಮತ್ತು ಭೀಮಣ್ಣಾ ಖಂಡ್ರೆ ಇನ್ನಿಟ್ಯೂಟ್ ಆಫ್ ಟೆಕ್ನಾಲಜಿ (ಬಿಕೆಐಟಿ) ಭಾಲ್ಕಿ ಇವರ ಸಂಯುಕ್ತಶ್ರಾಯದಲ್ಲಿ ಆಗಸ್ಟ್ 21 ರಂದು ಸಾಯಂಕಾಲ 6 ಗಂಟೆಗೆ ಬಿಕೆಐಟಿ ಭಾಲ್ಕಿಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿರುತ್ತದೆ.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಲಿವೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐಟಿಐ, ಡಿಪ್ಲೋಮಾ, ಪದವಿ, ಕಂಪ್ಯೂಟರ್ ಆಪ್ಲಿಕೇಷನ್, ಇಂಜೀನಿಯರ್ ಪದವಿ ಪಡೆದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದ್ದು, ಅರ್ಹತೆಗಳಿಗನುಗುಣವಾಗಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಯು ರೆಜ್ಯೂಮ್‌ದೊಂದಿಗೆ ಮೂಲ ದಾಖಲಾತಿ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ಆಧಾರ ಕಾರ್ಡ್ ಮತ್ತು ಇತ್ತೀಚಿನ 05 ಪಾಸ್‌ಪೋರ್ಟ್ ಭಾವಚಿತ್ರಗಳು, ಉದ್ಯೋಗ ಮೇಳವು ಹುದ್ದೆಗಳಿಗೆ ಸಂದರ್ಶನ ಸಂಪೂರ್ಣ ಉಚಿತ, ಉದ್ಯೋಗ ಮೇಳದ ಸಂದರ್ಶನಕ್ಕೆ ಆಗಸ್ಟ್ 21 ರಂದು ಬೆಳಿಗ್ಗೆ 9 ಗಂಟೆಗೆ ಭೀಮಣ್ಣ ಖಂಡ್ರೆ ಇನ್ನಿಟ್ಯೂಟ್ ಆಫ್ ಟೆಕ್ನಾಲಜಿ (ಬಿಕೆಐಟಿ) ಭಲ್ಕಿ ಆವರಣದಲ್ಲಿ ಹಾಜರಾಗಬೇಕು. ಉಯೋಗ ಮೇಳದ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಉಚಿತ ಟೀ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ, ಯಾವುದೇ ಅಭ್ಯರ್ಥಿಗಳಿಗೆ ವಸತಿ ಮತ್ತು ಸಾರಿಗೆ ವೆಚ್ಚವನ್ನು ಪಾವತಿಸಲಾಗುವುದಿಲ್ಲ.
ವಿಶೇಷ ಸೂಚನೆ: ಎಸ್.ಎಸ್.ಎಲ್.ಸಿ. ಕೌಂಟರ್ ನಂ. 01-04, ಎಸ್‌ಎಸ್‌ಎಲ್‌ಸಿ ಯಿಂದ ಪದವಿ ಕೌಂಟರ್ ನಂ. 05-12, ಐಟಿಐ ಕೌಂಟರ್ ನಂ. 13-22, ಡಿಪ್ಲೋಮಾ ಕೌಂಟರ್ ನಂ. 23-24, ಪದವಿ ಕೌಂಟರ್ ನಂ. 25-37, ಐಟಿಐ ಮತ್ತು ಡಿಪ್ಲೋಮಾ ಕೌಂಟರ್ ನಂ. 38-42, ಐಟಿಐ, ಡಿಪ್ಲೋಮಾ, ಬಿ.ಇ. ಕೌಂಟರ್ ನಂ. 43-45, ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೋಮಾ ಕೌಂಟರ್ ನಂ. 46-50 ನಲ್ಲಿ ವಿದ್ಯಾರ್ಹತೆಗಳಿಗನುಗುಣವಾಗಿ ಮೊದಲಿಗೆ ನೋಂದಣಿ ಮಾಡಿಕೊಳ್ಳುವುದು. ನಂತರ ಅದೇ ನೋಂದಣಿ ಕೇಂದ್ರದಿAದ ಸಂದರ್ಶನಕ್ಕೆ ಹಾಜರಾಗಲು ಗುರುತಿನ ಚೀಟಿ ತೆಗೆದುಕೊಂಡು ಸಂಬAಧಿಸಿದ ಕೌಂಟ್‌ನಲ್ಲಿ ಸಂದರ್ಶನಕ್ಕೆ ಹಾಜರಾಗುವುದು.
ಪ್ರಯುಕ್ತ ಆಸಕ್ತರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಇದರ ಲಾಭವನ್ನು ಜಿಲ್ಲೆಯ ಹೆಚ್ಚಿನ ಯುವಕರು ಪಡೆಯಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!