ಆ.19 ಉಚಿತ ಆರೋಗ್ಯ ತಪಾಸಣೆ ಶಿಬಿರ
ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಮಲ್ಲಿನಾಥ ಆಯುರ್ವೇದಿಕ್ ಫಾರ್ಮಸಿಯಲ್ಲಿ ಶನಿವಾರ(ಆ.19) ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಖ್ಯಾತ ಆಯುರ್ವೇದ ತಜ್ಞ ಡಾ. ನಂಜುಂಡಯ್ಯ ಸ್ವಾಮಿ ಅವರು ಸ್ತ್ರೀ- ಪುರುಷ ಬಂಜೇತನ, ಬೊಜ್ಜು, ಸೋರಿಯಾಸಿಸ್, ಬಿಳಿ ತೊನ್ನು, ಕಿಡ್ನಿ ವೈಫಲ್ಯ, ಪಿ.ಸಿ.ಒ.ಡಿ, ಋತು ಸಮಸ್ಯೆ, ಕಿಡ್ನಿ, ಪಿತ್ತಕೋಶದಲ್ಲಿ ಕಲ್ಲು, ಅಸ್ತಮಾ ಗ್ಯಾಂಗ್ರಿನ್ ಮೊದಲಾದ ಕಾಯಿಲೆಗಳ ತಪಾಸಣೆ ನಡೆಸಲಿದ್ದಾರೆ.
ಜಿಲ್ಲೆಯ ರೋಗಿಗಳು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಶುಭ್ರ ಆರೋಗ್ಯ ಧಾಮದ ಮುಖ್ಯಸ್ಥೆ ಡಾ. ಪ್ರಭಾ ಸ್ವಾಮಿ ಮನವಿ ಮಾಡಿದ್ದಾರೆ.
ಶಿಬಿರದ ಕುರಿತು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8884541901, 9620201901 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.