ಬೀದರ್

ಆರೋಗ್ಯ ಶಿಕ್ಷಣ ನೀಡುವುದರ ಮುಖಾಂತರ ಕುಷ್ಠರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಢಿಸಿ-ವೀರಶೆಟ್ಟಿ ಚನ್ನಶೆಟ್ಟಿ

ಬೀದರ, ಆಗಸ್ಟ್ 5 – ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಆಶಯದಂತೆ ಕುಷ್ಠರೋಗಿಗಳನ್ನು ಶೀಘ್ರ ಪತ್ತೆ ಹಚ್ಚಿ, ಕುಷ್ಠರೋಗದಿಂದ ಆಗುವ ಅಂಗವಿಕಲತೆಯನ್ನು ತಡೆಗಟ್ಟುವುದು ಮಕ್ಕಳಲ್ಲಿ ಮತ್ತು ಜನರಲ್ಲಿ ಇದ್ದ ಮೂಢ ನಂಬಿಕೆಯನ್ನು ಆರೋಗ್ಯ ಶಿಕ್ಷಣ ನೀಡುವುದರ ಮುಖಾಂತರ ಅರಿವು ಮೂಢಿಸಬೇಕೆಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ ಹೇಳಿದರು.
ಅವರು ಇತ್ತೀಚಿಗೆ ಸರಕಾರಿ ಹಿರಿಯ ಪ್ರೌಢ ಶಾಲೆ ಕಮಠಾಣದಲ್ಲಿ ಹಮ್ಮಿಕೊಂಡಿದ್ದ ಕುಷ್ಠರೋಗ ನಿರ್ಮೂಲನಾ ಕುರಿತು ಮಕ್ಕಳಲ್ಲಿ ಅರಿವು ಮೂಢಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ, ಇದು ಯಾವುದೇ ಶಾಪ, ಪಾಪದಿಂದ ಬರುವುದಿಲ್ಲ. ಈ ಕಾಯಿಲೆ ಮೈಕೋ ಬ್ಯಾಕ್ಟೇರಿಯಾ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ. ಈ ಕಾಯಿಲೆಗೆ ಹೆದರಬೇಕಾಗಿಲ್ಲ ಎಲ್ಲಾ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಸಿಗುವ ಬಹು ಔಷಧಿ ಚಿಕಿತ್ಸೆಯಿಂದ ಸಂಪುರ್ಣವಾಗಿ ಗುಣಪಡಿಸಬಹುದಾಗಿದೆ. ಇದು ಒಂದು ನರ ಮತ್ತು ಚರ್ಮದ ಕಾಯಿಲೆಯಾಗಿದ್ದು, ಸ್ಪರ್ಶ ಜ್ಞಾನ ನೋವು ನವೆ ಇಲ್ಲದ ತಿಳಿ ಬಿಳಿ ತಾಮ್ರ ಬಣ್ಣದ ಮಚ್ಚೆಗಳು, ಕೈಕಾಲು ಜೋಮು ಉಂಟಾಗುವುದು, ಮಚ್ಚೆಯ ಜಾಗದಲ್ಲಿ ಕೂದಲುಗಳು ಉದುರುವಿಕೆ ಆಗುತ್ತದೆ. ಈ ಲಕ್ಷಣಗಳು ಕಂಡುಬAದಲ್ಲಿ ಅದನ್ನು ಗುಪ್ತವಾಗಿಡದೇ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಎಲ್ಲಾ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಸಿಗುವ ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು ಹಾಗೂ ಕುಷ್ಠರೋಗದಿಂದ ಆಗುವ ಅಂಗವಿಕಲತೆಯನ್ನು ಗಡೆಗಟ್ಟಬಹುದು.
ಕುಷ್ಠರೋಗ ಬಂದ ವ್ಯಕ್ತಿಗಳಿಗೆ ಚಿಕಿತ್ಸೆಗೆ ಸಹಾಯ ಮಾಡಬೇಕೆ ವಿನಹಃ ಅವರನ್ನು ಕೆಟ್ಟ ದೃಷ್ಟಿಯಿಂದ ಕಾಣಬಾರದು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದಾಗ ಅವರನ್ನು ಸಹಕರಿಸಬೇಕೆಂದು ಹೇಳಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಇಮಾನ್ವೆಲ ಮಾತನಾಡಿ, ಕುಷ್ಟರೋಗವು ಮೈಕೊ ಬ್ಯಾಕ್ಟರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ. ಈ ರೋಗಕ್ಕೆ ಇನ್ನೊಂದು ಹೆಸರು ‘ಹೆನ್ಸನ್ ಡಿಸೀಜ್’ ಎಂದು ಕರೆಯುತ್ತಾರೆ. ಸುಮಾರು 100 ರಿಂದ 200 ಬೇರೆ ಬೇರೆ ಕುಟುಂಬಗಳಿAದ ಬಂದಿರುವ ನೀವು ನಿಮ್ಮ ತಂದೆ ತಾಯಿಗಳಿಗೆ ಈ ರೋಗದ ಕುರಿತು ಮೂಡನಂಬಿಕೆಗೆ ಬಿದ್ದು ಆರೋಗ್ಯವನ್ನು ಕೆಡಿಸಿಕೊಳ್ಳದೆ ಅದರ ಬಗ್ಗೆ ತಿಳಿದು ಸೂಕ್ತ ಚಿಕಿತ್ಸೆ ಪಡೆಯಬೇಕು. ಕುಷ್ಠರೋಗ ಬೇರು ಸಹಿತ ಕಿತ್ತೊಗೆಯಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ನಮ್ಮ ದೇಶವನ್ನು ಕುಷ್ಟರೋಗಮುಕ್ತ ದೇಶ ಮಾಡಲು ತಾವು ಸಹಕಾರ ನೀಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಅಬ್ದುಲ್ ಹೈ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಹಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು
Ghantepatrike kannada daily news Paper

Leave a Reply

error: Content is protected !!