ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಧ್ಯೇಯವಾಗಿರಲಿ : ಶ್ರೀ ಪಾಂಡುರಂಗ ಬೆಲ್ದಾರ
ರೋಗ-ರುಜಿನಗಳಿಂದ ಮುಕ್ತವಾದ ಸ್ವಚ್ಛ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸುವ ಧ್ಯೇಯ ನಾವು ಬೆಳೆಸಿಕೊಳ್ಳಬೇಕು,
ಆರೋಗ್ಯವೇ ಭಾಗ್ಯ ಎಂಬ ನಮ್ಮ ಭಾರತೀಯ ಪರಂಪರೆಯಂತೆ ದಿನನಿತ್ಯ ಸ್ವಚ್ಛ, ಶುದ್ಧ,ಪೋಷಕಾಂಶ ಭರಿತ ಆಹಾರ ಸೇವಿಸುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಯಾವುದೇ ರೋಗ ಬರದಂತೆ ಯಶಸ್ವಿಯಾಗಿ ತಡೆಯಬಹುದು ಎಂದು ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರಂಗ ಬೆಲ್ದಾರ ನುಡಿದರು.
ನಗರದ ಹಿಮಾಲಯ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರುನಾಡ ವಿಜ್ಞಾನ ಅಕಾಡೆಮಿ ಜಿಲ್ಲಾ ಘಟಕ ಬೀದರ,ಕಲ್ಯಾಣ ಭಾರತಿ ಕಲೆ ಸಾಹಿತ್ಯ ಹಾಗು ಸಾಂಸ್ಕೃತಿಕ ಟ್ರಸ್ಟ್ ಮತ್ತು ನ್ಯೂ ಮದರ ತೆರೇಸಾ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ
ಆಯೋಜಿಸಿರುವ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಕೆಲಸವಿಲ್ಲದ ವಸ್ತು ಕ್ಷಯವಾಗುವ ಹಾಗೆ ಅಗತ್ಯ ವ್ಯಾಯಾಮ ಸಿಗದ ದೇಹ ರೋಗ ರುಜಿನಗಳ ಗುಡಾಗು ವುದು ಸಹಜ, ಒಂದು ಹೊಸ ಮೊಬೈಲ್ ಕೈಗೆ ಬಂದರೆ ಅದಕ್ಕೊಂದು ರಕ್ಷಾಕವಚ, ಪರದೆ, ರಕ್ಷಕ ಗಾಜು ಎಂತೆಲ್ಲಾ ಖರ್ಚು ಮಾಡುವ ನಾವು ನಮ್ಮ ಆರೋಗ್ಯದ ಬಗ್ಗೆ ಕೂಡ ಅಷ್ಟೇ ಕಾಳಜಿ ವಹಿಸಬೇಕು ಅತಿಯಾದರೆ ಅಮೃತವೂ ವಿಷವಂತೆ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಆರೋಗ್ಯವೇ ನಿಜವಾದ ಸಂಪತ್ತು ಆದ್ದರಿಂದ ನಮ್ಮ ಆಹಾರ ಸೇವನೆ ನಮ್ಮ ದೈಹಿಕ ಶ್ರಮಗಳ ನಡುವೆ ಸಮತೋಲನ ಕಾಯ್ದುಕೊಳ್ಳುಲು ಬೇಕಾದಷ್ಟು ವ್ಯಾಯಾಮ,ಯೋಗದ ಜೊತೆಗೆ ಸಾಕಷ್ಟು ನಿದ್ರೆ ಮಾಡಲೇಬೇಕು ಆವಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ವಿಜ್ಞಾನ ಶಿಕ್ಷಕರಾದ ಶ್ರೀ ಸಂಜೀವಕುಮಾರ ಸ್ವಾಮಿ ಅವರು ಮಾತನಾಡಿ ಸಣ್ಣ ನೋವಿನ ಅನುಭವಗಳನ್ನು ಮರೆಸುವ ಗುಳಿಗೆಗಳು ರೋಗಗಳನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಲ್ಲ ಬುದ್ಧಿವಂತ ಯಂತ್ರಗಳು ಕರೆದಾಗ ಬರುವ ಅಂಬಲೆನ್ಸಗಳು ಹಾಗೂ ವೈದ್ಯಕೀಯ ಸೇವೆಗಳು ಮೂರು ಮಾರಿಗೊಂದು ಆಸ್ಪತ್ರೆಗಳು ಇವುಗಳನ್ನು ನೋಡುತ್ತಿದ್ದರೆ ಆಧುನಿಕ ವೈದ್ಯ ವಿಜ್ಞಾನದ ಬೆಳವಣಿಗೆಗೆ ಹೆಮ್ಮೆ ಪಡಲೇಬೇಕು,ಸೂಕ್ಷ್ಮವಾಗಿ ಗಮನಿಸಿದರೆ ಭಯಪಡುವಂತಹ ವಿಚಾರವು ಇವೆ ಆಗಿವೆ ಇಂತಹ ಅತ್ಯಾಧುನಿಕ ಸೌಲಭ್ಯ ಗಳು ಇವೆ ಎಂದು ಸೋಮಾರಿತನ ಮಾಡದೆ ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯವಾದ ಔಷಧ,ಊಟ, ವ್ಯಾಯಾಮ ಹಾಗು ನಿತ್ಯ ಚಟುವಟಿಕೆಗಳಲ್ಲಿ ಕಾಪಾಡಬೇಕಾದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ನಾವೆಲ್ಲರೂ ಆರೋಗ್ಯವಂತರಾಗಿರಲು ಸಾಧ್ಯ ಎಂದು ನುಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಶ್ರೀ ಅನಂತ್ ಕುಲಕರ್ಣಿ ಮಾತನಾಡಿ ಆರೋಗ್ಯದ ಬಗ್ಗೆ ಕಾಳಜಿ ಕುರಿತಾದ ವಿಷಯಗಳನ್ನು ಜನಸಾಮಾನ್ಯರಿಗೆ ಹಾಗೂ ಮಕ್ಕಳಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಇಂತಹ ವಿವಿಧ ಕಾರ್ಯಕ್ರಮವನ್ನು ಆಚರಿಸಿ ಎಲ್ಲರಲ್ಲಿ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ನುಡಿದರು.
ವೇದಿಕೆ ಮೇಲೆ ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ರವಿಕುಮಾರ ಕುಮನೂರ, ಶಾರದಾ ಪ್ರೌಢ ಶಾಲೆ ಮುಖ್ಯ ಗುರುಗಳಾದ ಶ್ರೀಮತಿ ಅನಿತಾ ಬಿರಾದಾರ, ಶಿಕ್ಷಕರಾದ ಮಾರುತಿ ಬಿರಾದರ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಜಯಪ್ರಕಾಶ ನಡೆಸಿದರು,ಧನರಾಜ ಸ್ವಾಗತಿಸಿದರೆ,ಶ್ರೀ ವಿಜಯಕುಮಾರ ವಂದಿಸಿದರು.