ಆರೋಗ್ಯಕರ ಸಮಾಜ ಮತ್ತು ಆರೋಗ್ಯವಂತ ಜನ ಇದ್ದರೆ ಸಮಾಜ-ದೇಶ ಬೆಳೆಯುತ್ತದೆ ಸಚಿವ ದಿನೇಶ್ ಗುಂಡುರಾವ
ಆರೋಗ್ಯ ಕ್ಷೇತ್ರ ಬಹಳ ಪ್ರಮುಖವಾದಂತಹ ಕ್ಷೇತ್ರ, ಆರೋಗ್ಯಕರ ಸಮಾಜ ಮತ್ತು ಆರೋಗ್ಯವಂತಹ ಜನ ಅದು ಇದ್ದರೆ ಸಮಾಜ-ದೇಶ ಬೆಳೆಯುತ್ತದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ ಗುಂಡುರಾವ ಅವರು ಬೀದರ ನಗರದ ಪ್ರಸಿದ್ಧ ಗುರುನಾನಕ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮಾಡ್ಯುಲರ್ ಅಪೆರೇಷನ್ ಥೇಟರ್ಸ್, ಕ್ರಿಟಿಕಲ್ ಕೇರ್ ಯುನಿಟ್ ಲ್ಯಾಬ್ ಮತ್ತು ಡಯಾನೊಸ್ಟಿಕ್ಸ್ ಉದ್ಘಾಟನೆ ಮಾಡಿ ಸೇವೆಗೆ ಚಾಲನೆ ನೀಡಿದರು.
ಗುರು ನಾನಕ ಸಂಸ್ಥೆಯು ಲಾಭ ಪಡೆಯಬೇಕೆಂದು ನಡೆಸುತ್ತ ಇಲ್ಲ. ಇಲ್ಲಿನ ಜನರಿಗೆ ಸೇವೆ ಮಾಡಬೇಕು ಎಂಬ ಉದೇಶದಿಂದ ನಡೆಸುತ್ತಿದ್ದಾರೆ. ಈ ಭಾಗದ ಜನರಿಗೆ ಸೇವೆ ಮತ್ತು ಒಳ್ಳೆಯ ಸೌಲಭ್ಯಗಳು ಒದಗಿಸಿ ಕೊಡುತ್ತಿದ್ದಾರೆ ಎಂದರು.
ಅವರು ಮುಂದು ವರೆದು ಮಾತನಾಡುತ್ತ ನನ್ನ ತಂದೆಯವರಾದ ಆರ್. ಗುಂಡುರಾವ ಮತ್ತು ಸರದಾರ ಜೋಗಾಸಿಂಗ ಅವರ ಒಳ್ಳೆಯ ಸ್ನೇಹಿತರಾಗಿದ್ದರು. ಜೋಗಾ ಸಿಂಗ್ ಅವರ ಕೊಡುಗೆ ಇಡಿ ಬೀದರ ಜಿಲ್ಲೆಗೆ ಕ್ರಾಂತಿಕರ ಕೊಡುಗೆÉ ಎಂದು ತಿಳಿಸಿದರು.
ಅರಣ್ಯ ಮತ್ತು ಪರಿಸರ ಸಚಿವರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರು ಶ್ರೀ ಈಶ್ವರ ಖಂಡ್ರೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ ಇವತ್ತಿನ ಈ ಕಾರ್ಯಕ್ರಮಕ್ಕೆ ಹಾರ್ದಿಕ ಶುಭಕೋರಿದರು. ಗುರುನಾನಕ್ ಝೀರಾ ಪ್ರಬಂಧಕ ಸಮಿತಿಯು ಹಲವು ಜನೋಪಯೋಗಿ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವಿನಿಗೆ ಜಗಳವಿಲ್ಲ ಹಾಗಾಗಿ ಆರೋಗ್ಯವೆ ಭಾಗ್ಯ, ಆರೋಗ್ಯ ಚೆನ್ನಾಗಿದ್ದರೆ ಎಲ್ಲಾ, ಆರೋಗ್ಯ ಇಲ್ಲವಾದರೆ ಏನು ಇಲ್ಲ ಎಂದು ಹೇಳಿದರು. ಇಂದಿನ ಯುವಕ-ಯುವತಿಯರು ದಾರಿ ತಪ್ಪಿ ದುಷ್ಚಟ ದುರ್ಗುಣಗಳಿಗೆ ಬಲಿಯಾಗುತ್ತಿದ್ದಾರೆ. ಆರೋಗ್ಯದ ಕಡೆಗೆ ಹೆಚ್ಚಿನ ಒತ್ತುಕೊಡಬೇಕು ಎಂದು ಕರೆಕೊಟ್ಟರು. ನಮ್ಮ ದೇಶ ಇದೊಂದು ಯುವಕರ ರಾಷ್ಟ್ರ, ಯುವ ಶಕ್ತಿ ಅಣುಶಕ್ತಿ ಇದ್ದಹಾಗೆ ಆದರೆ ಯುವಕರು ಶಾರೀರಿಕವಾಗಿ ಸದೃಢವಾಗಿರಬೇಕು ಎಂದು ಕರೆಕೊಟ್ಟರು. ಪ್ರಥಮ ಆದ್ಯತೆ ಆರೋಗ್ಯ ಭಾಗ್ಯ ಎಲ್ಲಾ ಭಾಗ್ಯಗಳಿಗಿಂತಲೂ ಮಿಗಿಲಾದಂತದ್ದು, ಅದಕ್ಕೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಸಚಿವರಾದ ಶ್ರೀ ರಹೀಂಖಾನ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಡಾ. ಬಲಬೀರಸಿಂಗ್ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು. ಸೋಲಾಪುರ, ಹೈದ್ರಾಬಾದ್ ಆಸ್ಪತ್ರೆಗಳಿಗೆ ಹೋಗುವ ಸ್ಥಿತಿ ಇತ್ತು.
ಈಗ ಗುರುನಾನಕ್ ಆಸ್ಪತ್ರೆ ಎಲ್ಲಾ ತರಹದ ಸೌಲಭ್ಯಗಳು ಒದಗಸಿಕೊಡುತ್ತಿದೆ, ಬಡವರಿಗೆ ನೆರವಾಗುವ ರೀತಿಯಲ್ಲಿ ಗುರುನಾನಕ್ ಆಸ್ಪತ್ರೆಯನ್ನು ನಡೆಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಡಾ|| ಎಸ್. ಬಲಬೀರ ಸಿಂಗ್, ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ, ಅತಿಗಳಾಗಿ ಬೀದರ ದಕ್ಷಿಣ ಶಾಸಕ ಡಾ|| ಶೈಲೇಂದ್ರ ಬೆಲ್ದಾಳೆ, ಎಂ.ಎಲ್.ಸಿ. ಶ್ರೀ ಚಂದ್ರ ಶೇಖರ ಬಿ.ಪಾಟೀಲ, ಎಂ.ಎಲ್.ಸಿ.ಗಳಾದ ಶ್ರೀ ಭೀಮರಾವ ಪಾಟೀಲ, ಮಾಜಿ ಮಂತ್ರಿಗಳಾದ ರಾಜಶೇಖರ ಬಿ.ಪಾಟೀಲ, ಮಾಜಿ ಸಚಿವರಾದ ಶ್ರೀ ಬಂಡೆಪ್ಪಾ ಖಾಸೆಂಪೂರ ಮತ್ತು ಮಾಜಿ ಎಂ.ಎಲ್.ಸಿ. ವಿಜಯ ಸಿಂಗ್, ಆಸ್ಪತ್ರೆಯ ಆಡಳಿತಾಧಿಕಾರಿ ಸರದಾರ ಪುನಿತ್ ಸಿಂಗ್ ಉಪಸ್ಥಿತರಿದ್ದರು.