ಬೀದರ್

ಆಧುನಿಕ ಜಗತ್ತಿಗೆ ರೋಬೊಟಿಕ್ ಕಾರ್ಯ ಅತ್ಯವಶ್ಯಕ – ಪ್ರೊ. ಮೂಲಿಮನಿ

ಬೀದರ: ಇಂದಿನ ಆಧುನಿಕ ಜಗತ್ತಿಗೆ ರೋಬೊಟಿಕ್ ಕಾರ್ಯ ಅತ್ಯವಶ್ಯಕವಾಗಿ ಬೇಕಾಗಿದೆ. ತಾಂತ್ರಿಕ ಯುಗದಲ್ಲಿ ರೋಬೊಟಿಕ್ ಯಂತ್ರವು ಮಾನವ ನಿರ್ಮಿತ ಯಂತ್ರವಾಗಿದ್ದರೂ ಮನುಷ್ಯನಿಂದ ಮಾಡಲಾಗದ ಅದೆಷ್ಟೋ ಕಾರ್ಯಗಳನ್ನು ರೋಬೊಟಿಕ್ ಮಾಡುತ್ತಿರುವುದು ಶ್ಲಾಘನೀಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ವಿಶ್ರಾಂತ ಕುಲಪತಿಗಳು ಹಾಗೂ ಖ್ಯಾತ ವಿಜ್ಞಾನಿ ಪ್ರೊ. ಬಿ.ಜಿ.ಮೂಲಿಮನಿ ತಿಳಿಸಿದರು.
ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಮೂರು ದಿವಸಗಳ ‘ರೋಬೊಟಿಕ್ ಯೋಜನೆಗಳ ಅನುಷ್ಠಾನ’ ಕಾರ್ಯಾಗಾರದಲ್ಲಿ ಭಾಗವಹಿಸಿ ಆಶಯ ನುಡಿಗಳನ್ನಾಡಿದರು. ರೋಬೊಟಿಕ್ ಮೂಲ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಈ ತಂತ್ರಜ್ಞಾನವನ್ನು ನೀವು ವಿದ್ಯಾರ್ಥಿಗಳು ಚೆನ್ನಾಗಿ ಅರಿತುಕೊಂಡಿದ್ದೇ ಆಗಿದ್ದರೆ ನಿಮ್ಮ ಸಮಸ್ಯೆಗೆ ಅನುಗುಣವಾಗಿ ನಿಮ್ಮದೇ ಆದ ರೋಬೊಟನ್ನು ರೂಪಿಸಿಕೊಳ್ಳಬಹುದು. ಸಿಲಿಕಾನ್ ಟೆಕ್ನಾಲಜಿಯೇ ಇದರ ಮೂಲವಾಗಿದೆ. ಇದನ್ನೇ ಜಗತ್ತು ಉಪಯೋಗಿಸಿಕೊಂಡು ರೋಬೊಟ್‌ನಲ್ಲಿ ಸಮಸ್ಯೆಗೆ ಅನುಗುಣವಾಗಿ ಬದಲಾವಣೆಗಳನ್ನು ಮಾರ್ಪಡಿಸಿಕೊಳ್ಳುತ್ತಿವೆ. ಈಗಾಗಲೇ ಬೆಂಗಳೂರಿನAತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಶೈಕ್ಷಣಿಕ, ಮೆಡಿಕಲ್, ಬೈಪಾಸ್ ಸರ್ಜರಿ, ಕಿಡ್ನಿ ಡಯಾಲಿಸಿಸ್‌ನಂತಹ ಉತ್ತಮ ಕಾರ್ಯಗಳನ್ನು ರೋಬೊಟ್ ನಿರ್ವಹಿಸುತ್ತಿದೆ. ಈ ಸಿಲಿಕಾನ್ ಟೆಕ್ನಾಲಜಿಯಲ್ಲಿ ದೀರ್ಘವಾಗಿ ವಿಚಾರ ಮಾಡಲು ವಿದ್ಯಾರ್ಥಿ ವೃಂದಕ್ಕೆ ಕೆಲವು ಸಮಸ್ಯೆಗಳನ್ನು ಕೊಟ್ಟು ಮೂರು ದಿವಸಗಳ ಈ ಕಾರ್ಯಾಗಾರದಲ್ಲಿ ಇದರ ಬಗ್ಗೆ ವಿಚಾರಿಸಬೇಕು. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಬೀದರ ಹೆಸರು ವೃದ್ದಿಸಬೇಕೆಂದು ಮೂಲಿಮನಿ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉತ್ತರಪ್ರದೇಶದ ಖರಗಪುರದ ಐಐಟಿ ಘಟಕದ ಸಲಹೆಗಾರ ಮತ್ತು ಮಾರ್ಗದರ್ಶಕರಾದ ಉತ್ಸವ್ ಪ್ರತಾಪಸಿಂಗ್ ಅವರು ಮಾತನಾಡಿ ಮೂರು ದಿವಸಗಳ ಕಾರ್ಯಾಗಾರದಲ್ಲಿ ನೀಡುವ ಸಲಹೆ ಮತ್ತು ಮಾರ್ಗದರ್ಶನವನ್ನು ಸದುಪಯೋಗ ಪಡೆದುಕೊಳ್ಳಬೇಕು. ರೋಬೊಟಿಕ್ ಟೆಕ್ನಾಲಜಿಯ ಮೂಲ ಮತ್ತು ಅದರ ಅನುಷ್ಠಾನ ಹಾಗೂ ಅಳವಡಿಕೆಗಳ ಬಗ್ಗೆ ಈ ಮೂರು ದಿವಸಗಳ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಜೊತೆ ಕೂಡಿಕೊಂಡು ಅವರಿಗೆ ವಿಶೇಷ ಅರಿವು ಮೂಡಿಸಲಾಗುವುದು. ಸಮಯದ ಸದ್ಬಳಕೆ ಮತ್ತು ಇಚ್ಛಾಶಕ್ತಿ ಅತ್ಯವಶ್ಯಕವಾಗಿದೆ. ಏನಾದರೂ ಹೊಸದನ್ನು ಮಾಡಬೇಕೆಂಬ ಉದ್ದೇಶ ನಿಮ್ಮಲ್ಲಿದ್ದರೆ ಬೀದರ ಹೆಸರು ವಿಶ್ವಮಟ್ಟದಲ್ಲಿ ರೋಬೊಟ್ ಅನುಷ್ಠಾನದ ಮೂಲಕ ಬೆಳೆಸಬಹುದು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ಮಾತನಾಡಿ ರೋಬೊಟಿಕ್ ಟೆಕ್ನಾಲಜಿಯನ್ನು ನೇರವಾಗಿ ಅಳವಡಿಸುವುದರ ಬದಲಾಗಿ ಅದರ ಮಾಡೆಲಿಂಗ್, ಡಿಜೈನಿಂಗ್ ಕಾರ್ಯಕ್ಷಮತೆಯ ಬಗ್ಗೆ ತಿಳಿದುಕೊಂಡು ನಂತರ ನಿಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ರೋಬೊಟನ್ನು ತಯಾರಿಸಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಅಲ್ಲದೇ ಇನ್ನೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ನೊಂದಣಿ ಮಾಡಿಸಿಕೊಂಡು ಈ ವಿನೂತನ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಷ್ಟಿçÃಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ನಿರ್ದೇಶಕರಾದ ರವಿ ಹಾಲಳ್ಳಿ, ಶ್ರೀನಾಥ ನಾಗೂರೆ, ಕಾರ್ಯಾಗಾರದ ಕಾರ್ಯನಿರ್ವಾಹಕರಾದ ಪ್ರೊ. ಸೋಮನಾಥ ಬಿರಾದಾರ, ಪ್ರೊ. ರಮೇಶ ಪಾಟೀಲ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದ ಸಂಯೋಜಕ ಡಾ. ಮಲ್ಲಿಕಾರ್ಜುನ ಚೆಲ್ವಾ ನಿರೂಪಿಸಿದರೆ, ಉಪ ಪ್ರಾಂಶುಪಾಲರಾದ ಅನೀಲಕುಮಾರ ಚಿಕ್ಕಮಾಣೂರ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!