ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ 5 ಲಕ್ಷ ರೂ. ತಿಳುವಳಿ ಪತ್ರ ನೀಡಿದ ಸಚಿವ ರಹೀಂ ಖಾನ್
ಬೀದರ, ಅಗಸ್ಟ್ 24 – ಬೀದರ ತಾಲ್ಲೂಕಿನ ಜನವಾಡ ಹೋಬಳಿಯಲ್ಲಿ ರಾಜನಾಳ ಗ್ರಾಮದಲ್ಲಿ ಜೂನ್ 5 ರಂದು ದಿ.ರಾಮಣ್ಣ ತಂದೆ ಹೋಲೆಪ್ಪ ಹಾಸಗೊಂಡ ಇವರಿಗೆ 2.00 ಎಕರೆ 20 ಗುಂಟೆ ಜಮೀನಿನಲ್ಲಿ ಕೃಷಿ ಬೆಳೆಗಳು ಬೆಳಸಲಾಗುತ್ತಿದ್ದು ಪಿಕೆಪಿಎಸ್ ಅಲಿಯಂಬರನಲ್ಲಿ 30000 ರೂ. ಮತ್ತು ಎಸ್‌ಬಿಐ ಬೀದರದಲ್ಲಿ 124000 ರೂ. ಬೆಳೆಸಾಲ ಮಾಡಿಕೊಂಡು ಸತತವಾಗಿ ಬೆಳೆಗಳನ್ನು ನಿರಿಕ್ಷಿತ ಮಟ್ಟದಲ್ಲಿ ಇಳುವರಿ ಮಳೆಯ ಕೊರತೆಯಿಂದ ಬೆಳೆ ಇಳುವರಿ ಕುಸಿತಗೊಂಡಿರುವುದರಿAದ ಮನನೊಂದು ತಮ್ಮ ಹೊಲ್ಲದಲ್ಲಿ ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ರೈತ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಕೂಡಲೇ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್ ದಿ. ರಾಮಣ್ಣ ಗ್ರಾಮ ರಾಜನಾಳಕ್ಕೆ ಕೃಷಿ ಅಧಿಕಾರಿಗಳ ಜೊತೆಗಳೊಂದಿಗೆ ಭೇಟಿನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಅಧಿಕಾರಿಗಳಿಗೆ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕೂಡಲೇ ಪರಿಹಾರ ಧನ ಕ್ರಮವಹಿಸಲು ತಿಳಿಸಿದ ಪ್ರಯುಕ್ತ ದಿ. ರಾಮಣ ಅವರ ಪತ್ನಿಯಾದ ಸಿದ್ದಮ್ಮರವರಿಗೆ 5 ಲಕ್ಷ ರೂ. ನೇರವಾಗಿ ಸರ್ಕಾರದ ಪರಿಹಾರ ಧನ ಡಿಬಿಟಿ ಮುಖಾಂತರ ಕ್ರಮವಹಿಸಿ ಪರಿಹಾರ ಧನ ತಿಳಿವಳಿ ಪತ್ರವನ್ನು ದಿ. ರಾಮಣ್ಣ ರವರ ಪತ್ನಿ ಸಿದ್ದಮ್ಮ ಅವರಿಗೆ ಸಚಿವರು ನೀಡಿದರು.ಈ ಸಂದರ್ಭಧಲ್ಲಿ ಬೀದರ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.