ಬೀದರ್

ಆಗಸ್ಟ 25ರಂದು ನೂತನ ಸಂಸದರಿಗೆ ಮತ್ತು ನಾಮನಿರ್ದೇಶಿತರಾದ ಗಣ್ಯರಿಗೆ ಸನ್ಮಾನ ಸಮಾರಂಭ

ಬೀದರ:  ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ಆ.25 ರಂದು ಬೆಳಿಗ್ಗೆ 10.30 ಗಂಟೆಗೆ ನೂತನವಾಗಿ ಆಯ್ಕೆಯಾದ ಸಂಸದರಾದ ಸಾಗರ ಖಂಡ್ರೆ, ವಿಧಾನ ಪರಿಷತ್ತ ಸದಸ್ಯರಾಗಿ ಚುನಾಯಿತರಾಗಿರುವ ಡಾ|| ಚಂದ್ರಶೇಖರ ಪಾಟೀಲ ಹಾಗೂ ಕರ್ನಾಟಕ ಸರ್ಕಾರದಿಂದ ನಾಮನಿರ್ದೇಶಿತರಾಗಿರುವ ಶ್ರೀಮತಿ. ಮಾಲಾ ಬಿ. ನಾರಾಯಣರಾವ ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಅಮೃತರಾವ ಚಿಮಕೋಡೆ ಅಧ್ಯಕ್ಷರು, ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಬೀದರ ರವರಿಗೆ ಬೀದರ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ, ಪದಾಧಿಕಾರಿಗಳು ಸದಸ್ಯರಿಂದ ಹೃದಯಸ್ಪರ್ಶಿ ಅಭಿನಂದನಾ ಸಮಾರಂಭವನ್ನು ಬೀದರ ಹೊರವಲಯದಲ್ಲಿರುವ ಹೆಬ್ಬಾಳೆ ಲಕ್ಜುರಿಯಸ್ ಕನ್ವೆನ್ಷನ್ ಹಾಲ್, ಚಿಕ್ಕಪೇಟ-ಹೈದ್ರಾಬಾದ ರಿಂಗ್ ರೋಡ, ಬೀದರರಲ್ಲಿ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಖಂಡ್ರೆ  ಇವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೌರಾಡಳಿತ ಹಾಗೂ ಹಜ್ಜ್ ಸಚಿವರಾದ ರಹೀಮ್‌ಖಾನ್ ರವರು ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಮಾಜಿ ಸಚಿವರಾದ ರಾಜಶೇಖರ ಪಾಟೀಲ, , ವಿಧಾನ ಪರಿಷತ್ತು ಶಾಸಕರು ಭೀಮರಾವ ಪಾಟೀಲ , ಮಾಜಿ ಶಾಸಕರು ಅಶೋಕ ಖೇಣಿ, ಮಾಜಿ ಶಾಸಕರು, ವಿಧಾನ ಪರಿಷತ್ತು ಶಾಸಕರಾದ ವಿಜಯಸಿಂಗ್,  ಅರವಿಂದಕುಮಾರ ಅರಳಿ,  ಭೀಮಸೇನ್ ಸಿಂಧೆ. ಕಾಂಗ್ರೆಸ್ ಮುಖಂಡರು. ಭಾಗವಹಿಸಲಿದ್ದಾರೆ.
ಆದುದ್ದರಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು, ಬ್ಲಾಕ್ ಅಧ್ಯಕ್ಷರು, ಮುಂಚುಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಸವರಾಜ ಜಾಬಶೆಟ್ಟಿ ಅಧ್ಯಕ್ಷರು ಜಿಲ್ಲಾ ಕಾಂಗ್ರೇಸ್ ಸಮಿತಿ, ನಗರಾಭಿವೃದ್ಧಿ ಪ್ರಾಧಿಕಾರ ಬೀದರ ರವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!