ಬೀದರ್

ಅವಧಿಯೊಳಗೆ ಜಾನುವಾರು ಗಣತಿ ಕಾರ್ಯ ಯಶಸ್ವಿಗೊಳಿಸಿ-ಸಿಇಓ ಡಾ.ಗಿರೀಶ ಬದೋಲೆ

ಬೀದರ, ಆಗಸ್ಟ್.22 :- 21ನೇ ಜಾನುವಾರು ಗಣತಿಯು ತಂತ್ರಜ್ಞಾನ ಮೊಬೈಲ ಆಪ್ ಬಳಸಿ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಬೀದರ ಜಿಲ್ಲೆಯಲ್ಲಿ ಒಟ್ಟು 650 ಹಳ್ಳಿಗಳಿದ್ದು, 186 ವಾರ್ಡಗಳಿವೆ. ಜಿಲ್ಲೆಯಲ್ಲಿ ಒಟ್ಟು ಕುಟುಂಬಗಳ ಸಂಖ್ಯೆ 348228 ಇರುತ್ತದೆ. ಜಿಲ್ಲೆಯಲ್ಲಿ ಒಟ್ಟು 76 ಎಣಿಕೆದಾರರು ಹಾಗೂ 16 ಮೇಲ್ವಿಚಾರಕ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಗಣತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಗಿರೀಶ ಬದೋಲೆ ಹೇಳಿದರು.
ಅವರು ಜಿಲ್ಲಾ ಪಂಚಾಯತ ಬೀದರ ಹಾಗೂ ಪಶು ವೈದ್ಯ ಮತ್ತು ಪಶಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಡಿಯಲ್ಲಿ ಹಮ್ಮಿಕೊಂಡಿದ್ದ 21ನೇ ಜಾನುವಾರು ಗಣತಿಯ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
21ನೇ ಜಾನುವಾರು ಗಣತಿ ಕಾರ್ಯಕ್ರಮವು ರಾಷ್ಟಿçÃಯ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವು ಸೆಪ್ಟೆಂಬರ್ 2024ರ ಮಾಹೆಯಿಂದ ಡಿಸೆಂಬರ್-2024ರ ವರೆಗೆ ಒಟ್ಟು4 ತಿಂಗಳ ಅವಧಿಯಲ್ಲಿ ಕೈಗೊಳ್ಳಬೇಕಾಗಿರುತ್ತದೆ. ಜಾನುವಾರು ಗಣತಿಯಲ್ಲಿ ವಿವಿಧ ತಳಿಗಳ ಸಾಕುಪ್ರಾಣಿಗಳಾದ ದನ, ಎಮ್ಮೆ, ಕುರಿ,ಮೇಕೆ, ಹಂದಿ, ಕುದುರೆ, ಒಂಟೆ ನಾಯಿ, ಇತ್ಯಾದಿ, ಕುಕ್ಕುಟಗಳಾದ ಕೋಳಿ,ಟರ್ಕಿ, ಬಾತುಕೋಳಿ, ಇತರೆ ಕೋಳಿಗಳ ಜೊತೆಗೆ ಪಶು ಪಾಲನಾ ವಲಯದಲ್ಲಿ ಉಪಯೋಗಿಸುವ ಯಂತ್ರೋಪಕರಣಗಳ ಬಗ್ಗೆ ಮತ್ತು ಮೀನುಗಾರಿಕೆ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಬೇಕಾಗಿರುತ್ತದೆAದರು.
ಜಾನುವಾರು ಗಣತಿಯ ಮುಖ್ಯ ಉದ್ದೇಶ ಭಾರತವು ಕೃಷಿ ಪ್ರಧಾನದೇಶವಾಗಿದು,್ದ ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ರೈತಾಪಿ ಸಮುದಾಯಕ್ಕೆ ಪಶು ಸಂಗೋಪನೆ ಒಂದು ಪ್ರಮುಖ ಚಟುವಟಿಕೆಯಾಗಿರುತ್ತದೆ. ಆರ್ಥಿಕ ವ್ಯವಸ್ಥೆಯಲ್ಲಿ ಪಶು ಸಂಪತ್ತು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಮುಖ ಉತ್ಪನ್ನಗಳಾದ ಹಾಲು, ಮಾಂಸ, ಮೊಟ್ಟೆ, ಉಣ್ಣೆ ಇತ್ಯಾದಿಗಳಿಗೆ ಜಾನುವಾರುಗಳೆ ಮೂಲಾಧಾರವಾಗಿವೆ. ಈ ಹಿನ್ನೆಲೆಯಲ್ಲಿ ಜಾನುವಾರು ಗಣತಿಯಿಂದ ಹೊರಬರುವ ಅಂಶಗಳು ರಾಷ್ಟ÷್ಷ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರದ ಪ್ರಗತಿಪರ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ನರಸಪ್ಪ ಎ.ಡಿ., ರಾಯಚೂರು ಪಶು ಪಾಲನಾ ಇಲಾಖೆಯ ಜಂಟಿ ನಿರ್ದೇಶಕ (ರಾಜ್ಯ ವಲಯ) ಡಾ.ಕೃಷ್ಣಮೂರ್ತಿ, ಕರ್ನಾಟಕ ಪಶು ವೈದ್ಯರ ಸಂಘ ಬೆಂಗಳೂರಿನ ಅಧ್ಯಕ್ಷ ಡಾ.ಶಿವಶರಣಪ್ಪ ಏಲಗೋಡ, ಬಸವಕಲ್ಯಾಣ ಮುಖ್ಯ ಪಶು ವೈದ್ಯಾಧಿಕಾರಿ ಡಾ.ರವೀಂದ್ರನಾಥ ಜಿ., ಡಾ.ಜಕಿಯುದ್ದಿನ್, ಡಾ.ನಾಗರಾಜ ಕಾಂಗಳೆ ಸೇರಿದಂತೆ ಎಲ್ಲಾ ತಾಲ್ಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!