ಬೀದರ್

ಅಲರ್ಟ್ ಘೋಷಣೆಯಾಗಿದ್ದು ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಹೋಗಬಾರದು -: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ, ಜುಲೈ 25 (ಕರ್ನಾಟಕ ವಾರ್ತೆ)- ಬೀದರ ಜಿಲ್ಲೆಯಾದ್ಯಂತ ಜುಲೈ 27 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು 100 ರಿಂದ 130 ಮಿಲಿ ಮೀಟರ್ ಮಳೆಯಾಗಲಿದ್ದು ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಹೋಗಬಾರದು ಮತ್ತು ಜನ, ಜಾನುವಾರುಗಳು ನದಿ, ಕೆರೆ ಮತ್ತು ಹಳ್ಳಗಳ ಕಡೆಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಬ್ರಿಜ್ ಮೇಲೆ ನೀರು ಬಂದು ಮತ್ತು ಕೆಳ ಹಂತದ ಬ್ರಿಜ್‌ಗಳಲ್ಲಿ ನೀರು ಹೆಚ್ಚು ಹರಿದು ನಮ್ಮ ಜಿಲ್ಲೆಯಲ್ಲಿ ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಹಾಗಾಗಿ ಜಿಲ್ಲೆಯ ವಿವಿಧ ತಾಲ್ಲೂಕಿನ ಯಾವ ಯಾವ ಬ್ರಿಜ್‌ಗಳಲ್ಲಿ ಹೆಚ್ಚಿನ ನೀರು ಬರುತ್ತದೆ ಎಂಬ ಮಾಹಿತಿಯನ್ನು ಪಿ.ಡಬ್ಲೂ.ಡಿ ಹಾಗೂ ಪಿ.ಆರ್.ಇ.ಡಿ ಅಧಿಕಾರಿಗಳು ಸಂಬAಧಿಸಿದ ಆಯಾ ತಾಲ್ಲೂಕಿನ ತಹಶಿಲ್ದಾರರಿಗೆ ಮಾಹಿತಿ ನೀಡಬೇಕು ಅಂತಹ ಬ್ರಿಜ್‌ಗಳಲ್ಲಿ ಅವರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಾರೆ ಎಂದರು.
ಗುರುವಾರ ರೆಡ್ ಅಲರ್ಟ್ ಇರುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿ.ಡಿ.ಓ ಮತ್ತು ಗ್ರಾಮಗಳಲ್ಲಿ ಗ್ರಾಮ ಸೇವಕರು ಡಂಗುರ ಹಾಕಿಸಿ ಜನರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದಂತೆ ಮತ್ತು ನದಿ, ಕೆರೆ ಮತ್ತು ಹಳ್ಳಗಳ ಕಡೆ ಹೋಗದಂತೆ ಎಚ್ಚರಿಕೆ ನೀಡಬೇಕು. ಮನೆಗಳು ಬಿಳುವ ಮಣ್ಣಿನ ಮನೆಗಳಾಗಿದ್ದರೆ ತಾತ್ಕಾಲಿಕವಾಗಿ ತಮ್ಮ ಅಕ್ಕ- ಪಕ್ಕದ ಸಂಬAಧಿಕರ ಮನೆಯಲ್ಲಿ ಇರುವಂತೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಬೇಕೆಂದರು. ಮತ್ತು ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕಾರಂಜಾ ಡ್ಯಾಂನಿAದ ನೀರು ಬಿಡುತ್ತಿದ್ದು, ಡ್ಯಾಂ ನ ಕೆಳಕಡೆಯ ಹಳ್ಳಿಯ ಜನರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.
ಜುಲೈ 26 ಮತ್ತು 27 ರಂದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕೆಲಸ ನಿರ್ವಹಿಸಬೇಕು ಯಾರು ರಜೆಯ ಮೇಲೆ ಹೋಗುವ ಹಾಗಿಲ್ಲ ಈ ಎರಡು ದಿನ ತಮ್ಮ ಎಲ್ಲಾ ರಜೆಗಳನ್ನು ರದ್ದು ಗೊಳಿಸಲಾಗಿದೆ ಹಾಗೂ ಎಲ್ಲರೂ ಮೊಬೈಲ್ ಕರೆಗಳನ್ನು ಸ್ವೀಕರಿಸಬೇಕು ಯಾರು ಯಾವುದೇ ನೆಪ ಹೇಳುವಂತಿಲ್ಲ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ನೀಡಿದರು.
ಮೇಲ್ಚಾವಣೆ ಸೋರುತ್ತಿರುವ ಹಾಗೂ ಕೆಳ ಹಂತಗಳಲ್ಲಿ ನೀರು ಬರುವ ಕೊಠಡಿಗಳಲ್ಲಿ ಶಾಲಾ ಮಕ್ಕಳಿಗೆ ಕೂಡಿಸದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಿಗೆ ಸೂಚನೆ ನೀಡಿದರು. ನಗರದಲ್ಲಿರುವ ಓಪನ್ ಡ್ರೆನೆಜ್‌ಗಳನ್ನು ಜೆ.ಸಿ.ಪಿ ಮೂಲಕ ಸ್ವಚ್ಚಗೊಳಿಸಿ ಅಂದಾಗ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವದಿಲ್ಲ ಮತ್ತು ಮುಂಚಿತವಾಗಿ ತಮ್ಮ ಮುನಸಿಪಾಲಟಿಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ಇರುವಂತೆ ನೋಡಿಕೊಳ್ಳಬೇಕು. ಕರೆಂಟ್ ಹೋದರೆ ಸಮಸ್ಯೆಯಾಗುತ್ತದೆ ಮುಂಚಿತವಾಗಿ ಓ.ಟಿ.ಎಚ್ ನೀರಿನ ಟ್ಯಾಂಕ್‌ಗಳನ್ನು ತುಂಬಿಸಬೇಕೆAದು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.
ಯಾವುದೇ ಕರೆ ಬಂದ ತಕ್ಷಣ ತಹಶಿಲ್ದಾರ, ಇ.ಓ., ಅಗ್ನಿಶಾಮಕ ದಳ, ಜೆಸ್ಕಾ, ಆರೋಗ್ಯ ಇಲಾಖೆ ಹಾಗೂ ಇತರೆ ಸಂಬAಧಿಸಿದ ಅಧಿಕಾರಿಗಳು ಟೀಂ ರೀತಿಯಲ್ಲಿ ಕೆಲಸ ಮಾಡಬೇಕು ಅಂದಾಗ ಯಾವುದೇ ಸಮಸ್ಯೆಗಳಾದರು ತಕ್ಷಣ ಅದನ್ನು ಪರಿಹರಿಸಲು ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ಮಾತನಾಡಿ ಪಿ.ಡಿ.ಓ.ಗಳು ಕೇಂದ್ರ ಸ್ಥಾನದಲ್ಲಿದ್ದು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಮಳೆ ಹೆಚ್ಚಾದಾಗ ಮುಂಜಾಗ್ರತೆ ವಹಿಸದಿದ್ದರೆ ಅನೇಕ ಅನಾಹುತಗಳು ಸಂಭವಿಸಬಹುದು ಹಾಗಾಗಿ ಎಲ್ಲಾ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಕೆಲಸಮಾಡಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್. ಅವರು ಮಾತನಾಡಿ ಪೋಲಿಸ್ ಅಧಿಕಾರಿಗಳಿಗೆ ವಯರಲೆಸ್ ಇರಬೇಕು. ವಾಕಿಟಾಕಿ ಕ್ಯಾರಿ ಮಾಡಬೇಕು ಮತ್ತು ಯಾವುದೇ ಮಾಹಿತಿಯನ್ನು ತಕ್ಷಣ ಕಂಟ್ರೋಲ್ ರೂಮ್‌ಗೆ ತಿಳಿಸಬೇಕು. ಸಂಬAಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ತೈಯಾರಿಯಲ್ಲಿ ಇರಬೇಕೆಂದು ಹೇಳಿದರು.
ಈ ವಿಡಿಯೋ ಸಂವಾದದಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತರಾದ ರಮೇಶ ಕೋಲಾರ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶಿಲ್ದಾರರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!