ಬೀದರ್

ಅನಧಿಕೃತ ಗಾಂಜಾ ಸಾಕಾಣಿಕೆ ಮಾಡುತ್ತಿದ್ದ 04 ಜನ ಅರೋಪಿಗಳ ಬಂಧನ-ಎಸ್.ಪಿ.ಪ್ರದೀಪ ಗುಂಟಿ

ಬೀದರ, ಜುಲೈ.13 : ಅನಧಿಕೃತವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿರುವ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ 3,19,74,730 ರೂ. ಬೆಲೆವುಳ್ಳ ಮಾಲು ಜಪ್ತಿ ಮಾಡಿ ಆರೋಪಿತರನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ ಹೇಳಿದರು.
ಅವರು ಶನಿವಾರದಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಆರೋಪಿತರು ಓಡಿಸಾದಿಂದ ಮಹಾರಾಷ್ಟç ರಾಜ್ಯಕ್ಕೆ ಅನಧಿಕೃತವಾಗಿ ಗಾಂಜಾ ಸಾಕಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅವರಿಂದ 305 ಕೆಜಿ ಗಾಂಜಾ ಅಂದಾಜು ಕಿಮ್ಮತ್ತು 3,05,56,000 ರೂ., ಕೃತ್ಯಕ್ಕೆ ಉಪಯೋಗಿಸಿದ ಲಾರಿ ಅಂದಾಜು ಕಿಮ್ಮತ್ತು 8,00,000 ರೂ. ಮತ್ತು ಒಂದು ಕಾರ್ ಅಂದಾಜು ಕಿಮ್ಮತ್ತು 6,00,000 ರೂ., 04 ಮೊಬೈಲ್ ಅಂದಾಜು ಕಿಮ್ಮತ್ತು 9500 ಮತ್ತು ನಗದು ಹಣ 9230 ರೂ.ಸೇರಿ ಒಟ್ಟು 3,19,74,730 ರೂ. ಬೆಲೆವುಳ್ಳ ಮಾಲನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಲ್ಲಿಕಾರ್ಜುನರಾವ @ ಮಧು ಬಿಲ್ಡರ ತಂದೆ ಗೋಪಾಲರಾವ ಕುಪ್ಪಲ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ತಲೆ ಮರೆಸಿಕೊಂಡ 06 ಜನ ಆರೋಪಿತರಲ್ಲಿ 03 ಜನ ಆರೋಪಿತರನ್ನು ಬೆಂಳೂರದಲ್ಲಿ ದಸ್ತಗಿರಿ ಮಾಡಿ, ಕೃತ್ಯಕ್ಕೆ ಬಳಸಿದ ಒಂದು ಚಕು, ಒಂದು ಕಾರ್ ನಂ. ಟಿಎಸ್ 13 ಈಝಡ 4044, ನಗದು 56000 ರೂ. ಹಾಗೂ 50 ಗ್ರಾಂ ಬಂಗಾರ ಆಭರಣಗಳನ್ನು ಜಪ್ತಿ ಮಾಡಿದ್ದು, ಪ್ರಕರಣದಲ್ಲಿ ಇನ್ನು 3 ಜನ ಆರೋಪಿತರನ್ನು ದಸ್ತಗಿರಿ ಬಾಕಿ ಇದ್ದು ತನಿಖೆ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದರು.

ಬೀದರ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣ ಆರೋಪಿಯನ್ನು ಬಂಧಿಸಿ ಅವನು ಕಳುವು ಮಾಡಿಕೊಂಡು ಹೋಗಿದ್ದ 11.97 ಗ್ರಾಂ. ಬಂಗಾರದ ಆಭರಣ ಅಂದಾಜು ಕಿಮ್ಮತ್ತು 56,000 ರೂ. ಹಾಗೂ 15.35 ಗ್ರಾಂ. ಬೆಳ್ಳಿ ಆಭÀರಣ ಅಂದಾಜು ಕಿಮ್ಮತ್ತು 13,000 ರೂ.ನ್ನು ವಾರಸುದಾರರಿಗೆ ಹಿಂದಿರುಗಿಲಾಯಿತು.
ಈ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ, ಬೀದರನ ಡಿ.ವಾಯ್.ಎಸ್.ಪಿ.ಶಿವಣ್ಣಗೌಡ ಪಾಟೀಲ, ಹುಮನಾಬಾದ ಡಿ.ವಾಯ್.ಎಸ್.ಪಿ. ಜೆ.ಎಸ್ ನ್ಯಾಮೆಗೌಡರ, ಗಾಂಧಿ ಗಂಜ್ ಸಿಪಿಐ ಹನುಮರೆಡ್ಡಪ್ಪಾ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!