ಅತ್ಯಧಿಕ ಆದಾಯ: ನಿರ್ವಾಹಕ ಆರ್.ಬಿ. ರಮೇಶಗೆ ಪ್ರಶಸ್ತಿ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಅತ್ಯಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರಿಗೆ ಭಾಲ್ಕಿಯಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪ್ರಶಸ್ತಿ ಪ್ರದಾನ ಮಾಡಿದರು
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಅತ್ಯಧಿಕ ಆದಾಯ ತಂದಿದ್ದಕ್ಕೆ ಭಾಲ್ಕಿ ಡಿಪೊ ನಿರ್ವಾಹಕ ಆರ್.ಬಿ. ರಮೇಶ ಅವರಿಗೆ ಪ್ರಸಕ್ತ ಸಾಲಿನ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪ್ರಶಸ್ತಿ ದೊರೆತಿದೆ.
ಭಾಲ್ಕಿ ಡಿಪೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಆರ್.ಬಿ. ರಮೇಶ ಅವರು ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅನೇಕ ಬಾರಿ ಅತ್ಯಧಿಕ ಆದಾಯ (ಇಪಿಕೆಎಂ) ದಾಖಲಿಸಿ ಗಮನ ಸೆಳೆದಿದ್ದಾರೆ.
ಕೆಎಂಪಿಎಲ್ ಮಾಸ್ಟರ್ ಶಾಂತವೀರ, ಮೇಲ್ವಿಚಾರಕ ಝರಣಪ್ಪ, ಸಂಚಾರ ಇನ್‍ಸ್ಪೆಕ್ಟರ್ ಹಣಮಂತ, ಕ್ಯಾಷಿಯರ್‍ಗಳಾದ ಶಂಕರ, ಮಾಣಿಕ, ನಿರ್ವಾಹಕರಾದ ಸಾಯಿ, ಮಂಜು, ಚಾಲಕ ನಟರಾಜ, ಭದ್ರತಾ ಸಿಬ್ಬಂದಿ ದಿನೇಶ, ನಾಗೇಶ ಇದ್ದರು.