ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ
ಬೀದರ. ಆಗಸ್ಟ್ 27 :- ಬೀದರ ಜಿಲ್ಲೆಯ ಜನವಾಡಾದಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಶಾಲೆಯಲ್ಲಿ ಖಾಲಿ ಇರುವ 1-ಪಿ.ಸಿ.ಎಮ್ (ಗಣೀತ) ಅಂಗ್ಲ ಮಾಧ್ಯಮ, 2-ಕಲಾ ಅಂಗ್ಲ (ಸಮಾಜ ವಿಜ್ಞಾನ ಇಂಗ್ಲೀಷ ಮಾಧ್ಯಮ) ಹಾಗೂ 1-ಕನ್ನಡ ಭಾಷೆ ಒಟ್ಟು 4 ಸ್ಥಾನಗಳು ಖಾಲಿ ಇದ್ದು, ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಶಾಲೆಗೆ ಖುದ್ದಾಗಿ ಭೇಟಿ ನೀಡಿ ದಿನಾಂಕ 30-08-2024ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಶಾಲೆಯ ಮುಖ್ಯಗುರುಗಳ ಮೋ.ಸಂ:9480252294 ಅಥವಾ ಪ್ರ.ದ.ಸ 8970224448 ಗೆ ಸಂಪರ್ಕಿಸಬಹುದಾಗಿದೆ ಎಂದು ಜನವಾಡ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಶಾಲೆಯ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.