ಅಜ್ಜಿಯ ಆದರ್ಶ ಮೈಗೂಡಿಸಿಕೊಂಡ ನಾರಾಯಣರಾವ ಕಾಂಬಳೆ
ಕಿತ್ತು ತಿನ್ನುವ ಬಡತನ ಬೇಗೆಯಲ್ಲಿ ಬೆಳೆದು, ಯಾರ ಸಹಾಯಕ ಸಹಕಾರವಿಲ್ಲದೆ. ತನ್ನ ಅಜ್ಜಿಯ ಆದರ್ಶ, ಸಂಸ್ಕೃತಿಕ ಪರಿಸರದಲ್ಲಿ ಬೆಳೆದು, ಡಾ|| ಬಿ.ಆರ್. ಅಂಬೇಡ್ಕರವರ ಬದುಕನ್ನು ಉಸಿರಾಗಿಸಿಕೊಂಡು ಸಾಧನೆ ಪರ್ವದಾಟಿದ ನಾರಾಯಣರಾವ ಕಾಂಬಳೆ ಬೆಂಕಿಯಲ್ಲಿ ಅರಳಿದ ಹೂ ಎಂದು ಸಾಹಿತಿ ಪಾರ್ವತಿ ವ್ಹಿ. ಸೋನಾರೆ ನುಡಿದರು.
ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ 68ನೇ ಮನೆ ಅಂಗಳದಲ್ಲಿ ಮಾತುಕತೆಯನ್ನು ತಾಯಿ ಭವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ ಮಕ್ಕಳ ಸಾಹಿತ್ಯ ಪರಿಷತ್ತ ಜಿಲ್ಲಾ ಅಧ್ಯಕ್ಷ ಪಾರ್ವತಿ ವ್ಹಿ. ಸೋನಾರೆ ಮುಂದುವರೆದು ಭಾಲ್ಕಿ ತಾಲೂಕಿನ ತೆಲಗಾಂವದಲ್ಲಿ ಹುಟ್ಟಿ ಅನೇಕ ನೋವುಗಳನ್ನು ಸಹಿಸಿ ಮೆಟ್ಟಿ ಮೇಲೆ ಬಂದವರು. ಗ್ರಾಮದಲ್ಲಿ ಸತ್ತ ಧನ ಎಳೆಯುವುದು, ದೇವಾಲ ಸ್ವಚ್ಛತೆ ಹಾಗೂ ಅನೇಕ ಕಾರ್ಯಗಳನ್ನು ಮಾಡಿ ಮನೆ ಮನೆಗೆ ಭೀಕ್ಷೆ ಬೇಡುವ ಅಗಸ್ಯನ ಕೆಲಸ ಮಾಡಿ ತೊಂಗುಳ ರೊಟ್ಟಿ ಮನೆಗೆ ತಂದಾಗ ಅದನ್ನು ತಿಪ್ಪೆಗೆ ಬಿಸಾಡಿ ನೈಜತೆಯ ಕಾಯಕಕ್ಕೆ ತೊಂಗಳನ್ನ ಬೇಡ ದುಡಿತಕ್ಕೆ ದುಡ್ಡಿ ಕೊಡಿ ಎಂದು ಹೋರಾಟ ಮಾಡಿದ 72 ವರ್ಷದ ಹೋರಾಟಗಾರ ನಾರಾಯಣರಾವ ಕಾಂಬಳೆ ಸಮಾಜಕ್ಕೊಂದು ಮಾದರಿ.
ಕಾರ್ಯಕ್ರಮದ ಕೇಂದ್ರಬಿAದುಗಳಾದ ನಾರಾಯಣರಾವ ಕಾಂಬಳೆ ತನ್ನ ಕಷ್ಟ ನೋವುಗಳನ್ನು ಇಷ್ಟದಂತೆ ಅವಲೋಕಿಸಿ ಮಾತನಾಡುತ್ತ ನಾನು ಉಚಿತ ಹಾಸ್ಟಲ್‌ನಲ್ಲಿ ಇರುವಾಗ ನನ್ನ ಸಮಾಜದ ಅನೇಕ ವಿದ್ಯಾರ್ಥಿಗಳು ಉಚಿತ ಊಟ ಮಾಡಿ ಪೋಲಿ ಹುಡುಗರ ಜೊತೆಗೆ ಓಡಾಡುವಾಗ ಅವರನ್ನು ಎಚ್ಚರಿಸಿ ಜೀವನ ಕಗ್ಗಂಟಾಗಿ ಮಾಡಿಕೊಳ್ಳಬೇಡಿ ಎಂದು ಪ್ರಥಮ ಕವನ ಬರೆದದ್ದು ಒಂದು ರೋಮಾಂಚಕಾರಿ ಘಟನೆ ಎಂದರು.
1995-96 ರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಆಹಾರ ಪರಿವೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವಾಗ ಅಂದಿನ ಜಿಲ್ಲಾಧಿಕಾರಿಗಳಾದ ಕೆ. ರತ್ನ ಪ್ರಭ ರವರ ನೇತೃತ್ವದಲ್ಲಿ ಪ್ರಥಮ ಬೀದರ ಉತ್ಸವ ಆಯೋಜಿಸಿದಾಗ ಅದರ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದ್ದು ನನ್ನ ಕ್ಷಮತೆಗೆ ಸಿಕ್ಕ ಗೌರವ ಮನ್ನಣೆ ಅದಾಗಿತ್ತು. ನನಗೆ ಇಂಗ್ಲೀಷ್, ಕನ್ನಡ, ಮರಾಠಿ, ಹಿಂದಿ ಮತ್ತು ತೆಲಗು ಭಾಷೆ ಓದಲು ಬರೆಯಲು ಕರಗತ ಮಾಡಿಕೊಂಡಿದ್ದು ಈಗಾಗಲೇ ಐದು ಗ್ರಂಥಗಳನ್ನು ಬರೆದು ಅದರಲ್ಲಿ ಎರಡು ಗ್ರಂಥಗಳು ಇಂಗ್ಲೀಷನಿAದ ಅನುವಾದ ಮಾಡಿರುತ್ತೇನೆ.
ಅನೇಕ ಸ್ವರಚಿತ ಕವನಗಳು ಸೂಸ್ತಾçವ್ಯವಾಗಿ ಹಾಡುವುದು ನನ್ನ ಅಜ್ಜಿ, ಅವ್ವ ಮತ್ತು ಅಪ್ಪನಿಂದ ಕಲಿತ್ತಿದ್ದೇನೆ. ಬೌದ್ಧ ಜೀವನ ಮಾರ್ಗ ಇಂಗ್ಲೀಷ್ ಗ್ರಂಥ ಕನ್ನಡಕ್ಕೆ ಅನುವಾದನೆ ಮಾಡಿರುವುದು ನನಗೊಂದು ಹೆಮ್ಮೆ.
ನನ್ನ ಸ್ವಾಭೀಮಾನ ಬದುಕಿಗೆ ಡಾ|| ಬಿ.ಆರ್. ಅಂಬೇಡ್ಕರ ರವರೆ ಆದರ್ಶ. ವ್ಯಕ್ತಿ ನಿರಂತರವಾದ ಪರಿಶ್ರಮ, ನೈಜತೆಯ ಶಿಕ್ಷಣ ಅವನನ್ನು ಬಾನೆತ್ತರಕ್ಕೆ ಏರಿಸಬಲ್ಲದು. ತನ್ನ ಅಸಮನಥೆಯ ಹೋರಾಟ, ಕೆಚ್ಚೆದೆಯ ಮಾತುಗಳಿಂದ ಹಂಚಿಕೊAಡರು. ವ್ಯಕ್ತಿಯಲ್ಲ ಸಾಧನೆ ಮಾಡುವ ಛಲ ಹಾಸು ಹೊಕ್ಕಾಗಬೇಕು ಎಂಥ ಸಂಕಷ್ಟಗಳು ಎದುರಾದರು ಎದೆ ಗುಂದದೆ ಮುಂದೆ ಸಾಗಿ ಜೀವನ ಸಾರ್ಥಕ ಮಾಡಿಕೊಂಡಿರುವುದಕ್ಕೆ ನಾನೇ ಸಾಕ್ಷಿ ಎಂದು ಅಭಿಮಾನದಿಂದ ನುಡಿದರು.
ಕಾರ್ಯಕ್ರಮಕ್ಕೆ ಸಂವಾದಕರಾಗಿ ಆಗಮಿಸಿದ ವೀರಭದ್ರಪ್ಪ ಉಪ್ಪಿನ ಹಾಗೂ ಶಿಕ್ಷಕಿ ಬುದ್ಧದೇವಿ ಅಶೋಕ ಅನೇಕ ಪ್ರಶ್ನೆಗಳನ್ನು ಕೇಳಿ ತಮ್ಮ ಸಾಹಿತ್ಯ, ಹೋರಾಟ, ಸಂಗೀತ ಹಾಗೂ ಸಂತೃಪ್ತಿ ಜೀವನಕ್ಕೆ ಪ್ರೇರಣೆ ಯಾರು ಎಂದಾಗ ಅತ್ಯಂತ ಸಂತಸದಿAದ ಅಜ್ಜಿ ಆದರ್ಶ, ಬಿ.ಆರ್. ಅಂಬೇಡ್ಕರ ರವರ ತತ್ತ÷್ವ ಸಿದ್ಧಾಂತ ನನ್ನ ದೂರದೃಷ್ಟಿಯ ಧನಾತ್ಮಕ ಆಲೋಚನೆ ನನಗೆ ಪ್ರೇರಣೆ ನೀಡಿವೆ ಎಂದು ತಮ್ಮ ಅನುಭವ ಹಂಚಿಕೊAಡು, ನನ್ನಲ್ಲಿ ಕೀಳೆಂಬ ಬಾವನೆ ಇರಲಿಲ್ಲ. ಅನೇಕ ಬ್ರಾಹ್ಮಣ, ಲಿಂಗಾಯತ ಸಮಾಜದ ಗೆಳೆಯರು ನನ್ನನ್ನು ಬೇದ-ಭಾವ ಮಾಡದೆ ಅಪ್ಪಿಕೊಂಡದ್ದನ್ನು ನಾನೆಂದು ಮರೆಯಲಾಗದು. ನನ್ನ ಸಾಹಿತ್ಯ, ಸಂಗೀತ, ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಗುರುತಿಸುವ ಹಿನ್ನಲೆಯಲ್ಲಿ ಸಾಹಿತ್ಯ ಪರಿಷತ್ತು ನನ್ನ ಮನೆಗೆ ಆಗಮಿಸಿ ಇಂತಹ ಗೌರವ ಸಲ್ಲಿಸುತ್ತಿರುವುದು ನನ್ನ ಅಯೋಭಾಗ್ಯ. ಪರಿಷತ್ತಿನವರ ಕಾರ್ಯ ಚಟುವಟಿಕೆಗಳಿಗೆ ನನ್ನ ಸಹಾಯ ಸಹಕಾರವೆಂದು ಮುಕ್ತ ಕಂಠದಿAದ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾಲೂಕಾ ಅಧ್ಯಕ್ಷರಾದ ಎಮ್.ಎಸ್. ಮನೋಹರ ಮಾತನಾಡಿ 68ನೇ ಈ ಕಾರ್ಯಕ್ರಮ ನಮಗೆ ಮುದನೀಡಿದೆ. ನಾರಾಯಣರಾವ ಕಾಂಬಳೆ ಒಬ್ಬ ಸಾಹಿತಿ, ಸಂಗೀತ ಹೋರಾಟಗಾರ ಎಂಬುವುದು ತಿಳಿಯಗೊಸ್ಕರ ಒಂದು ವರ್ಷದಿಂದ ನಿರಂತರ ಪ್ರಯತ್ನ ಮಾಡಿರುವ ಫಲವೇ ಇಂದಿನ ಕಾರ್ಯಕ್ರಮವಾಗಿದೆ ಎಂದು ನುಡಿದು ದಂಪತಿಗಳಿಗೆ ಸನ್ಮಾನಿಸಿದರು. ಮೊದಲಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಆಸೆಯ ನುಡಿ ಮಾತನಾಡಿದರೆ, ಪ್ರೊ. ಜಗನಾಥ ಕಮಲಾಪೂರೆ ನಿರೂಪಿಸಿದರೆ, ತಾಲ್ಲೂಕ ಕೋಶಾಧ್ಯಕ್ಷ ಅಶೋಕ ದಿಡಗೆ ವಂದಿಸಿದರು.