ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಹುಮನಾಬಾದ ತಾಲೂಕಿನ ಯುವ ಘಟಕದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.
ಹುಮನಾಬಾದ ಪಟ್ಟಣದ ಸರಫ್ ಬಜಾರ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಹುಮನಾಬಾದ ತಾಲೂಕಿನ ಯುವ ಘಟಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ವಿಶ್ವಕರ್ಮ ಏಕದಂಡಗಿ ಮಠ ಸುಲೇಪೇಟ್ ಮತ್ತು ಕಲಬುರಗಿ ಪೂಜ್ಯ ಶ್ರೀ ದೊಡ್ಡೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿತು.
ಹುಮನಾಬಾದ ತಾಲೂಕಿನ ಯುವ ಘಟಕದ ಅಧ್ಯಕ್ಷರಾಗಿ ವಿನೋದ ಪಂಚಾಳ, ಉಪಾಧ್ಯಕ್ಷರಾಗಿ ಸಚೀನ ಪಂಚಾಳ ಇವರನ್ನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬೀದರ ಹಾಗೂ ಕಲಬುರಗಿ ಉಸ್ತುವಾರಿಗಲಾದ ಅಶೋಕ ಎಸ್. ಪೊದ್ದಾರ್ ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರಶಾಂತ ವಿಶ್ವಕರ್ಮ, ಉಪಾಧ್ಯಕ್ಷರಾದ ಸೋಮನಾಥ ಪಂಚಾಳ ಹಾಗೂ ಮಾತೃ ಘಟಕದ ತಾಲೂಕಾಧ್ಯಕ್ಷರಾದ ಬಾಬುರಾವ ಪಾಂಚಾಳ, ಉಪಾಧ್ಯಕ್ಷರಾದ ರಮೇಶ ಪಂಚಾಳ, ಬಲಭೀಮ ಪಂಚಾಳ, ಮಂಜುನಾಥ ಪಂಚಾಳ, ಈಶ್ವರ ಪಂಚಾಳ, ಸುದೀಪ ಪಂಚಾಳ ಉಪಸ್ಥಿತಿದ್ದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರಶಾಂತ ವಿಶ್ವಕರ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.