ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ರಾಮಣ್ಣಾ ಬಡಿಗೇರ್ ರವರಿಗೆ ಸನ್ಮಾನ
ಬೀದರ: ಹುಬ್ಬಳಿ-ಧಾರವಾಡ ಮಹಾನಗರದ ಪಾಲಿಕೆಯ ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ರಾಮಣ್ಣಾ ಬಡಿಗೇರ್ ರವರಿಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಬೀದರ ವತಿಯಿಂದ ಹುಬ್ಬಳ್ಳಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ ವೈ. ಕಲ್ಲೂರ್, ಗೌರವಾಧ್ಯಕ್ಷರಾದ ಜೈಪ್ರಕಾಶ ಪೊದ್ದಾರ್, ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರಶಾಂತ ವಿಶ್ವಕರ್ಮ, ಉಪಾಧ್ಯಕ್ಷರಾದ ಸೋಮನಾಥ ಪಂಚಾಳ, ಬೀದರ-ಕಲಬುರಗಿ ಉಸ್ತುವಾರಿ ಅಶೋಕ ಪೊದ್ದಾರ್, ಮುಂತಾದವರು ಉಪಸ್ಥಿತರಿದ್ದರು.