ಬೀದರ್

ಅಂತರರಾಷ್ಟಿçÃಯ ಲೈಂಗಿಕ ಕಾರ್ಮಿಕ ದಿನಾಚರಣೆ

ಬೀದರ: ನ್ಯಾಷನಲ್ ನೆಟ್ವರ್ಕ್ ಆಫ್ ಸೆಕ್ಸ ವರ್ಕರ್ (ಓಓSW), ಕರ್ನಾಟಕ ಲೈಂಗಿಕ ಕಾರ್ಮಿಕರ ಯುನಿಯನ್ (ಏSWU), ಸಂಗಮ, ಸಂಗ್ರಾಮ್, ಸಾಥಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಲೈಂಗಿಕ ಕಾರ್ಮಿಕ ದಿನಾಚರಣೆ ಸ್ಮರಣಾರ್ಥ ಶಿವಾಇಂಟರ್ ನ್ಯಾಷನಲ್ ಹೋಟಲ್‌ನಲ್ಲಿ ವಕಾಲತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂವಿಧಾನ ಪೀಠಿಕೆ ಓದುವ ಮುಖಾಂತರ ಆರಂಭಿಸಲಾಯಿತು ಹಾಗೂ ಏSWU ನ ಭಾರತಿಯವರು ಪ್ರಾಸ್ತಾವಿಕ ನುಡಿಯಲ್ಲಿ ಆಐSಂ, ಪೋಲಿಸ್, ವಕೀಲರು ಮತ್ತು SWಗಳ ನಡುವಿನ ಸಂವಹನವನ್ನು ಸುಲಭಗೊಳಿಸಿ ಸುಪ್ರೀಂ ಕೋರ್ಟ್ ಆದೇಶದ ಕುರಿತು ಹೆಚ್ಚು ಚರ್ಚೆ ನಡೆಯಬೇಕೆಂದು ತಿಳಿಸಿದರು.
ರಾಜೇಶ್ ಸಂಗಮ ನಿರ್ದೆಶಕರು ಲೈಂಗಿಕ ಕಾರ್ಮಿಕರ ಸ್ಥಿತಿಗತಿ ಮತ್ತು ಲೈಂಗಿಕ ಕಾರ್ಮಿಕರ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್ ಆದೇಶ ಬುಧದೇವ್ ಕರ್ಮಾಸ್ಕರ v ಸ್ಟೇಟ್ (19 ಮೇ 2022) ಬಗ್ಗೆ ಸವಿಸ್ತಾರವಾಗಿ ಸಭೆಯಲ್ಲಿ ತಿಳಿಸಿದರು.
ಮಹಿಳಾ ಪೋಲಿಸ್ ಠಾಣೆಯ ಮಲ್ಲಮ್ಮ ಅವರು ಮಾತನಾಡುತ್ತಾ ಲೈಂಗಿಕ ಕಾರ್ಮಿಕರು ಕಳಂಕ ತಾರತಮ್ಯದಿಂದ ಮುಕ್ತಾರಾಗಬೇಕು, ಇತರರಂತೆ ಅವರು ಕಾರ್ಮಿಕರು ಮತ್ತು ಉದ್ಯಮಶೀಲರಾಗಬೇಕು ಅದರೊಂದಿಗೆ ಶಿಕ್ಷಣ ಮುಂದುವರಿಸಬೇಕೆAದು ತಿಳಿಸಿದರು.
ಈPಂI ಶ್ರೀನಿವಾಸ್ ಬಿರಾದಾರ್ ಮಾತನಾಡುತ್ತ ಲೈಂಗಿಕ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಮಹಿಳೆಯರು ಹೆಚ್ಚು ಒತ್ತುಕೊಡಬೇಕೆಂದು ತಿಳಿಸಿದರು. ಅದರೊಂದಿಗೆ ಲೈಂಗಿಕ ಕಾರ್ಮಿಕರು ಮುಖ್ಯವಾಹಿನಿಗೆ ಬರಬೇಕೆಂದು ಕರೆಕೊಟ್ಟರು ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗುರುರಾಜರವರು ಹಾಗೂ ರಾಮಸಿಂಗ್ ರಾಥೋಡ ಅವರು ಸಮುದಾಯದ ಸಮಾಜಿಕ ಭದ್ರತಾ ಯೋಜನೆಗಳಿಗೆ ಒತ್ತು ಕೊಟ್ಟು ಕೆಲಸ ಮಾಡೋಣ ಎಂದು ತಿಳಿಸಿದರು. ಲೈಂಗಿಕ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳನ್ನು ಮುಂದಿಟ್ಟುಕೊAಡು ಕೆಲಸ ಮಾಡೋಣ ಎಂದು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಭೀಮ್ ಮತ್ತು ಮಹೇಶ್ ನೆರವೇರಿಸಿದರು.
ಈ ಸಭೆಯಲ್ಲಿ ನಗರದ ಪೋಲಿಸ್ ಠಾಣೆಯ ಅಧಿಕಾರಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಾಮಸಿಂಗ್ ರಾಥೋಡ್, ಮಹಿಳಾ ಪೋಲಿಸ್ ಠಾಣೆ PSI ಮಲ್ಲಮ್ಮ ಈPಂI ಶ್ರೀನಿವಾಸ್ ಬಿರಾದಾರ್, ಸಂಗಮದ ನಿರ್ದೆಶಕರು ರಾಜೇಶ್, ಭಾರತಿ, ಶಕುಂತಲಾ, ಮುಕ್ತ ಮತ್ತು ಆಂಐSA ಪ್ಯಾನಲ್ ವಕೀಲರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರು ಗುರುರಾಜ ಅವರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!