ಘಂಟೆಪತ್ರಿಕೆ https://ghantepatrike.com ಕನ್ನಡ ದಿನ ಪತ್ರಿಕೆ Mon, 30 Sep 2024 19:12:42 +0000 en-US hourly 1 https://wordpress.org/?v=6.7.1 https://i0.wp.com/ghantepatrike.com/wp-content/uploads/2023/08/cropped-10730834_1481586868775025_7759957257873486155_n.jpg?fit=32%2C32&ssl=1 ಘಂಟೆಪತ್ರಿಕೆ https://ghantepatrike.com 32 32 175631880 ಬೀದರ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವಯೋ ನಿವೃತಿ ಹೊಂದಿದ್ದ ಅಧಿಕಾರಿಯವರುಗಳ ಬೀಳ್ಕೊಡುಗೆ ಸಮಾರಂಭ ” https://ghantepatrike.com/%e0%b2%ac%e0%b3%80%e0%b2%a6%e0%b2%b0-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af-%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%87%e0%b2%b2%e0%b2%be%e0%b2%96/ https://ghantepatrike.com/%e0%b2%ac%e0%b3%80%e0%b2%a6%e0%b2%b0-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af-%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%87%e0%b2%b2%e0%b2%be%e0%b2%96/#respond Mon, 30 Sep 2024 19:12:42 +0000 https://ghantepatrike.com/?p=4880  ಬೀದರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ವಯೋ ನಿವೃತಿ ಹೊಂದಿದ್ದ ಅಧಿಕಾರಿಯವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೀದರ ಜಿಲ್ಲಾ ಪೊಲೀಸ್ ಘಟಕದಿಂದ ಇಲಾಖೆಯಲ್ಲಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಪೂರ್ಣಾವಧಿ ಸೇವೆ ಸಲ್ಲಿಸಿ, ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ದೇವೇಂದ್ರಪ್ಪಾ, ಪಿ.ಎಸ್.ಐ ಬೀದರ ಸಂಚಾರಿ ಪೊಲೀಸ್ ಠಾಣೆ, ಶ್ರೀ ದೇವೆಂದ್ರ ಆರ್ಯ, ಎ.ಎಸ್.ಐ ಹುಮನಾಬಾದ ಪೊಲೀಸ್ ಠಾಣೆ. ಶ್ರೀಯುತರವರು ತಮ್ಮ ನಿವೃತ್ತಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುವಂತಾಗಲಿ ಹಾಗು ನಿಮ್ಮ ಅನುಭವವು ಸಮಾಜಕ್ಕೆ ಏನಾದರೊಂದು ಕೊಡುಗೆ ದೊರೆಯುವಂತಾಗಲಿ ಅಂತ ಹಾರೈಸುತ್ತಾ ಶ್ರೀಯುತರಿಗೆ ಸನ್ಮಾನಿಸಿ ಪ್ರಮಾಣ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಶುಭ ಕೊರಲಾಯಿತು.

]]>
https://ghantepatrike.com/%e0%b2%ac%e0%b3%80%e0%b2%a6%e0%b2%b0-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af-%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%87%e0%b2%b2%e0%b2%be%e0%b2%96/feed/ 0 4880
ಅಭಿವೃದ್ಧಿಗೆ ಬದ್ಧ ಜನಸೇವೆಗೆ ಸದಾ ಸಿದ್ಧ https://ghantepatrike.com/%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b3%86-%e0%b2%ac%e0%b2%a6%e0%b3%8d%e0%b2%a7-%e0%b2%9c%e0%b2%a8%e0%b2%b8%e0%b3%87%e0%b2%b5%e0%b3%86%e0%b2%97/ https://ghantepatrike.com/%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b3%86-%e0%b2%ac%e0%b2%a6%e0%b3%8d%e0%b2%a7-%e0%b2%9c%e0%b2%a8%e0%b2%b8%e0%b3%87%e0%b2%b5%e0%b3%86%e0%b2%97/#respond Mon, 30 Sep 2024 18:45:07 +0000 https://ghantepatrike.com/?p=4876 ಬೀದರ್: ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರ ೫೦ನೇ ಜನ್ಮ ದಿನವನ್ನು ಸೋಮವಾರ ವಿವಿಧ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜನ್ಮ ದಿನದ ಹಿನ್ನೆಲೆಯಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹಳ್ಳಿಖೇಡ್ ಹತ್ತಿರದ ಸೀಮಿ ನಾಗನಾಥ ಮಂದಿರ, ಚಾಳಕಾಪುರದ ಹನುಮಾನ ಮಂದಿರದಲ್ಲಿ,ಸಿದ್ಧಾರೂಢ ಮಠದಲ್ಲಿ ಪತ್ನಿ ಡಾ.ನೀತಾ ಮಗ ಕಿರಣ್ ಸಮೇತ ಕುಟುಂಬದವರೊAದಿಗೆ ಪೂಜೆ ಸಲ್ಲಿಸಿದರು. ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಣೆ, ಹಣ್ಣು-ಹಂಪಲ ವಿತರಣೆ, ಅನ್ನ ದಾಸೋಹ ಇನ್ನಿತರೆ ಸೇವಾ ಚಟುವಟಿಕೆ ಅಭಿಮಾನಿ ಬಳಗದಿಂದ ನಡೆದವು. ಅನೇಕ ಪೂಜ್ಯರು ಡಾ.ಬೆಲ್ದಾಳೆ ಅವರಿಗೆ ಆಶೀರ್ವದಿಸಿದರು.
ಜನಪ್ರತಿನಿಧಿಗಳು, ಗಣ್ಯರು, ಪಕ್ಷದ ಮುಖಂಡರು, ವಿವಿಧ ಸಮಾಜದ ಪ್ರಮುಖರು, ಸಂಘ-ಸAಸ್ಥೆಗಳ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಸಹಸ್ರಾರು ಜನರು ಗೌರವಿಸಿ, ಶುಭ ಹಾರೈಸಿದರು. ಬೆಳಗ್ಗೆಯಿಂದ ರಾತ್ರಿವರೆಗೆ ಪ್ರತಾಪನಗರದ ನಿವಾಸಕ್ಕೆ ಅನೇಕರು ಆಗಮಿಸಿ ವಿಷ್ ಮಾಡಿದರು. ಹೀಗಾಗಿ ಇಲ್ಲಿ ದಿನವಿಡೀ ಸುವರ್ಣ ಜನ್ಮೋತ್ಸವ ಸಂಭ್ರಮ ಮನೆ ಮಾಡಿತ್ತು.

ಸಂಜೆ ಬೆಲ್ದಾಳೆ ಫಂಕ್ಶನ್ ಹಾಲ್ ನಲ್ಲಿ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಸುವರ್ಣ ಸಂಭ್ರಮದ ಜನ್ಮೋತ್ಸವ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಡಾ.ಬೆಲ್ದಾಳೆ ಅವರು, ಜನರ ಸೇವೆ ಧ್ಯೇಯದಿಂದ ರಾಜಕಾರಣಕ್ಕೆ ಬಂದಿದ್ದೇನೆ. ಎರಡು ದಶಕದ ರಾಜಕೀಯ ಜೀವನದಲ್ಲಿ ಅನೇಕ ಏಳು-ಬೀಳುಗಳು ಕಂಡಿದ್ದೇನೆ. ಮೂರನೇ ಬಾರಿಗೆ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಬದ್ಧ ಹಾಗೂ ಜನರ ಸೇವೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.

ಇಂದು ಎಲ್ಲರ ಪ್ರೀತಿ, ಆತ್ಮೀಯತೆ, ಅಕ್ಕರೆಯ ಸನ್ಮಾನ, ಅಭಿಮಾನದ ಗೌರವ ಕಂಡು ನಾನು ಪುಳಕಿತನಾಗಿದ್ದೇನೆ. ಅಭಿಮಾನಿಗಳು ಬಹಳ ಖುಷಿಯಿಂದ ನಾನಾ ಸಾಮಾಜಿಕ ಕಾರ್ಯಕ್ರಮ ನಡೆಸಿದ್ದಾರೆ. ಎಲ್ಲೆಡೆ ದೊಡ್ಡ ಪ್ರಮಾಣದ ಕಟೌಟ್ ಹಾಕಿ ಸಂಭ್ರಮಿಸಿದ್ದಾರೆ. ನನ್ನ ಮೇಲಿಟ್ಟ ಪ್ರೀತಿ, ಗೌರವಕ್ಕೆ ಋಣಿಯಾಗಿದ್ದೇನೆ. ಬೇಡ ಎಂದರೂ ಇಷ್ಟೊಂದು ವಿಶಿಷ್ಠವಾಗಿ ೫೦ನೇ ಜನ್ಮ ದಿನ ಆಚರಿಸಿದ್ದು, ಈ ದಿನ ನನ್ನ ಜೀವನದ ಅವಿಸ್ಮರಣೀಯ ದಿನ ಎನಿಸಿದೆ. ಇದಕ್ಕಾಗಿ ಎಲ್ಲರಿಗೂ ಅನಂತ ಕೋಟಿ ಪ್ರಣಾಮಗಳು ಸಲ್ಲಿಸುತ್ತೇನೆ. ಎಲ್ಲರ ಆಶೀರ್ವಾದ ಹೀಗೆಯೇ ಇರಲಿ ಎಂದು ಕೋರಿದರು.

ಜೀವನದಲ್ಲಿ ಏರುಪೇರು, ಏಳು-ಬೀಳು ಸಾಮಾನ್ಯ. ಕಷ್ಟ-ಸುಖ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಇವು ಎಲ್ಲರಿಗೂ ಬಂದೇ ಬರುತ್ತವೆ. ನಾವೆಲ್ಲರೂ ಇದನ್ನು ಜೊತೆಯಾಗಿ ತೆಗೆದುಕೊಂಡು ಹೋಗಬೇಕು. ಕಷ್ಟ ಬಂದಾಗ ಕುಗ್ಗದೆ, ಸುಖವಿದ್ದಾಗ ಹಿಗ್ಗದೆ ಸಾಗಬೇಕು. ನನ್ನ ರಾಜಕೀಯ ಹಾಗೂ ಸಾರ್ವಜನಿಕ ಬದುಕಿನಲ್ಲಿ ಅನೇಕ ಏಳು-ಬೀಳು ಕಂಡಿದ್ದೇನೆ. ಆದರೆ ತಂದೆ-ತಾಯಿ ಆಶೀರ್ವಾದ, ದೇವರ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದ, ನಿಮ್ಮೆಲ್ಲರ ಆಶೀರ್ವಾದದಿಂದ ಎಲ್ಲವೂ ದಾಟಿ ಬಂದಿರುವೆ. ಜನರ ಸೇವೆ ಮಾಡುವ ಸಂಕಲ್ಪವೇ ನನಗೆ ದೊಡ್ಡ ಶಕ್ತಿ ನೀಡಿದೆ ಎಂದು
ಹೇಳಿದರು.

ನನ್ನ ಎರಡು ದಶಕದ ರಾಜಕೀಯ ಜೀವನದಲ್ಲಿ ಎಂಥದ್ದೇ ಪರಿಸ್ಥಿತಿ ಬಂದರೂ ಆತ್ಮವಿಶ್ವಾಸದಿಂದ, ಒಳ್ಳೆಯ ಗುರಿಯಿಂದ ಎದುರಿಸಿದ್ದರಿಂದ ಇಂದು ನಿಮ್ಮೆಲ್ಲರ ಮುಂದೆ ಶಾಸಕನಾಗಿ ನಿಂತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಶಕ್ತಿ, ಆಶೀರ್ವಾದವೇ ಕಾರಣ. ಸಮಾಜಕ್ಕೆ ಒಳ್ಳೆಯದು ಮಾಡಬೇಕು, ಜನರ ಸೇವೆ ಮಾಡಬೇಕು ಎಂಬ ಧ್ಯೇಯ ನನ್ನದು. ರಾಜಕೀಯ ಹಾದಿ ಅಷ್ಟೇನೂ ಸುಗಮವಾಗಿಲ್ಲ. ಆದರೂ ಜನತೆ ಕೊಟ್ಟ ಸಾಥ್ ನಿಂದ ರಾಜಕೀಯದ ರಥ ಒಂದು ಹಂತಕ್ಕೆ ಬಂದು ನಿಂತಿದೆ. ಎಲ್ಲರ ಆಶೀರ್ವಾದ, ಸಹಕಾರ, ಮಾರ್ಗದರ್ಶನ ನನಗೆ ರಾಜಕೀಯದಲ್ಲಿ ಸ್ಥಾನಮಾನ, ನೆಲೆ ಕಲ್ಪಿಸಿದೆ ಎಂದು ಹೇಳಿದರು.

೨೦೧೩ ಹಾಗೂ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ನಿರಾಸೆಯಾಗದೆ ಜನರ ಜೋತೆ ಇದ್ದು . ನನಗೆ ನನ್ನ ಕ್ಷೇತ್ರದ ಜನರ ಮೇಲೆ ಭರಪೂರ ನಂಬಿಕೆ, ವಿಶ್ವಾಸ ಇತ್ತು. ೨೦೨೩ರಲ್ಲಿ ನನ್ನ ಕೈಹಿಡಿದು ಮೊದಲ ಬಾರಿಗೆ ವಿಧಾನಸಭೆಗೆ ಕಳಿಸಿದರು. ನನ್ನ ಕ್ಷೇತ್ರದ ಎಲ್ಲ ಜನರಿಗೆ ಚಿರ ಋಣಿಯಾಗಿದ್ದೇನೆ. ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ. ಕುರ್ಚಿ ಸಿಗುತ್ತೆ, ಹೋಗುತ್ತೆ. ಇದು ಚಕ್ರದಂತೆ ಓಡುತ್ತಲೇ ಇರುತ್ತದೆ. ಆದರೆ ಅಧಿಕಾರ ಸಿಕ್ಕಾಗ ನಾವು ಮಾಡುವ ಒಳ್ಳೆಯ ಕೆಲಸ ಸದಾ ಜನಮಾನಸದಲ್ಲಿ ಉಳಿಯುತ್ತವೆ. ಜನರ ಸೇವೆ ನಮ್ಮ ಧ್ಯೇಯವಾದರೆ ಖಂಡಿತ ಜನರು ನಮ್ಮ ಕೈ ಬಿಡಲ್ಲ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಹೇಳಿದರು.

ವ್ಯಕ್ತಿ ಯಾವತ್ತೂ ದೊಡ್ಡವಲ್ಲ. ಅವನ ವ್ಯಕ್ತಿತ್ವ ದೊಡ್ಡದು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಜನರ ಮಧ್ಯೆ ನಾವು ಕೆಲಸ ಮಾಡಬೇಕು. ಉತ್ತಮ ವ್ಯಕ್ತಿತ್ವ ಹೊಂದಿ ರಾಜಕಾರಣ ಮಾಡುತ್ತ,ಜನರ ಸೇವೆ ಮಾಡುವ ಸಂಕಲ್ಪ ನಾವೆಲ್ಲ ಮಾಡಬೇಕಾಗಿದೆ. ಸರ್ಕಾರ ಯಾವುದೇ ಇರಲಿ, ಪಕ್ಷ ಯಾವುದೇ ಇರಲಿ ಉತ್ತಮ ವ್ಯಕ್ತಿತ್ವದ ಜೊತೆಗೆ ಸಮಾಜದ, ಸರ್ವರ ಅಭಿವೃದ್ಧಿ ಚಿಂತನೆ ನಮ್ಮದಾಗಿರಬೇಕು. ಇದರಿಂದ ನಮಗೂ, ಸಮಾಜಕ್ಕೂ ಒಳ್ಳೆಯದಾಗುತ್ತದೆ. ಜನರಿಗಾಗಿ ನನ್ನ ಮನೆ ಬಾಗಿಲು ಸದಾ ಖುಲ್ಲಾ ಇದೆ. ಮಾಡಿದ್ದು ಅಲ್ಪವಿದೆ. ಮುಂದೆ ಮಾಡಬೇಕಾಗಿರುವುದು ಇನ್ನೂ ಬಹಳ ಇದೆ ಎಂದು ನುಡಿದರು.

]]>
https://ghantepatrike.com/%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b3%86-%e0%b2%ac%e0%b2%a6%e0%b3%8d%e0%b2%a7-%e0%b2%9c%e0%b2%a8%e0%b2%b8%e0%b3%87%e0%b2%b5%e0%b3%86%e0%b2%97/feed/ 0 4876
ಜನರಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ : ಅಂಚೆ ಅಧೀಕ್ಷಕ ವಿ.ಎ. ಚಿತಕೋಟೆ https://ghantepatrike.com/%e0%b2%9c%e0%b2%a8%e0%b2%b0%e0%b2%b2%e0%b3%8d%e0%b2%b2%e0%b2%bf-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%b8%e0%b3%81%e0%b2%b5%e0%b3%81%e0%b2%a6/ https://ghantepatrike.com/%e0%b2%9c%e0%b2%a8%e0%b2%b0%e0%b2%b2%e0%b3%8d%e0%b2%b2%e0%b2%bf-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%b8%e0%b3%81%e0%b2%b5%e0%b3%81%e0%b2%a6/#respond Mon, 30 Sep 2024 18:38:31 +0000 https://ghantepatrike.com/?p=4872 ಬೀದರ್: ಸೆ.30:ಸ್ವಚ್ಛತೆಯೇ ಸೇವೆ ಅಭಿಯಾನದ ಪ್ರಯುಕ್ತ ಅಂಚೆ ಇಲಾಖೆಯ ಸಿಬ್ಬಂದಿ ನಗರದಲ್ಲಿ ಬುಧವಾರ ಸ್ವಚ್ಛತೆ ಜಾಗೃತಿ ಜಾಗೃತಿ ಜಾಥಾ ನಡೆಸಿದರು.

ಅಂಚೆ ಕೇಂದ್ರ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು.
ಮನೆ, ಓಣಿ, ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ದಿಸೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ ಎಂದು ಜಾಥಾಕ್ಕೆ ಚಾಲನೆ ನೀಡಿದ ಬೀದರ್ ಅಂಚೆ ಅಧೀಕ್ಷಕ ವಿ.ಎ. ಚಿತಕೋಟೆ ಹೇಳಿದರು.

ಅಂಚೆ ಇಲಾಖೆಯ ಬೀದರ್ ವಿಭಾಗದ ವತಿಯಿಂದ ಅಕ್ಟೋಬರ್ 2 ರ ವರೆಗೆ ಅಂಚೆ ಕಚೇರಿಗಳ ಒಳ, ಹೊರಗೆ ಸ್ವಚ್ಛತೆ, ಸಸಿ ನೆಡುವಿಕೆ, ಶಾಲೆಗಳ ಆವರಣದಲ್ಲಿ ಸಸಿ ನೆಡುವಿಕೆ, ಮಕ್ಕಳಲ್ಲಿ ಪರಿಸರ ಜಾಗೃತಿ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಚೆ ಪಾಲಕ ರಾಜೇಂದ್ರ ವಗ್ಗೆ, ಮಂಗಲಾ ಭಾಗವತ್, ದತ್ತಾತ್ರಿ, ಕಲ್ಲಪ್ಪ ಕೋಣಿ, ಚಿದಾನಂದ ಕಟ್ಟಿ ಹಾಗೂ ಅಂಚೆ ಸಿಬ್ಬಂದಿ ಪಾಲ್ಗೊಂಡಿದ್ದರು.

]]>
https://ghantepatrike.com/%e0%b2%9c%e0%b2%a8%e0%b2%b0%e0%b2%b2%e0%b3%8d%e0%b2%b2%e0%b2%bf-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%b8%e0%b3%81%e0%b2%b5%e0%b3%81%e0%b2%a6/feed/ 0 4872
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿ _ ಈಶ್ವರ ಖಂಡ್ರೆ https://ghantepatrike.com/%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf%e0%b2%97%e0%b2%b3-%e0%b2%b8%e0%b2%b0%e0%b3%8d%e0%b2%b5%e0%b2%a4%e0%b3%8b%e0%b2%ae%e0%b3%81%e0%b2%96-%e0%b2%ac/ https://ghantepatrike.com/%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf%e0%b2%97%e0%b2%b3-%e0%b2%b8%e0%b2%b0%e0%b3%8d%e0%b2%b5%e0%b2%a4%e0%b3%8b%e0%b2%ae%e0%b3%81%e0%b2%96-%e0%b2%ac/#respond Mon, 30 Sep 2024 18:33:47 +0000 https://ghantepatrike.com/?p=4869 ಭಾಲ್ಕಿ: ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು. ಸರ್ಕಾರದ ಯೋಜನೆಗಳ ಸದ್ಬಳಕೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸರ್ಕಾರಿ ಹಾಗು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾರದಲ್ಲಿ 6 ದಿನ ಪೌಷ್ಠಿಕ ಆಹಾರ ವಿತರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳು ರೂಪಿಸಿ, ನಿರಂತರ ಕಲಿಕೆಗೆ ಒತ್ತುನೀಡುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಉಚಿತ ವಸ್ತ್ರ ಸೇರಿದಂತೆ ವಿದ್ಯಾರ್ಥಿಗಳಲ್ಲಿಯ ಅಪೌಷ್ಟಿಕತೆ ನಿವಾರಣೆಗಾಗಿ ಈ ಮೊದಲು ವಾರದಲ್ಲಿ ಎರಡುದಿನ ಮಾತ್ರ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಆದರೆ ಅಜೀಂ ಪ್ರೇಂಜೀ ಸ್ವಯಂ ಸೇವಾ ಸಂಸ್ಥೆಯ ಸಹಕಾರದೊಂದಿಗೆ ವಾರದಲ್ಲಿ 6 ದಿನ ಪೌಷ್ಠಿಕ ಆಹಾರ ನೀಡಲು ನಿರ್ಧರಿಸಿ, 1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಡಿ.ಪಿ.ಐ ಸಲೀಂಪಾಷಾ, ಮದ್ಯಾನ್ಹ ಉಪಹಾರ ಯೋಜನೆ 2002-03 ರಿಂದ ಕರ್ನಾಟಕದ 7 ಜಿಲ್ಲೆಗಳಲ್ಲಿ ಮೊದಲು ಪ್ರಾರಂಭವಾಗಿ, ನಂತರ 2005 ರಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಾರಂಭಿಸಲಾಯಿತು. ಸದರಿ ವರ್ಷದಲ್ಲಿ ರಾಜ್ಯ ಸರ್ಕಾರ ಹಾಗು ಅಜೀಂ ಪ್ರೇಂಜಿಸಹಯೋಗದೊಂದಿಗೆ ವಾರದಲ್ಲಿ 4 ದಿನ ಮೊಟ್ಟೆ ವಿತರಣೆಗೆ ಒಪ್ಪಂದವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ, ತಾಲೂಕಿನಲ್ಲಿ ಒಟ್ಟು 278 ಅಡುಗೆ ಕೇಂದ್ರಗಳಿವೆ, 24376 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು ತಾಲೂಕಿನಲ್ಲಿ 678 ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಬಸವರಾಜ ಜಿಡ್ಡೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಕ್ಷೇತ್ರಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ.ಬಿ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ರಾಜಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ದತ್ತು ಕಾಟಕರ, ರಾಜಕುಮಾರ ಜೊಳದಪಕೆ, ಹಣಮಂತ ಕಾರಾಮುಂಗೆ, ವಿಜಯಕುಮಾರ ಚವ್ಹಾಣ, ಅಶೋಕ ತಾಂಬೋಳೆ, ಗೋವಿಂದರಾವ ಬಿರಾದಾರ, ಉತ್ತಮ ಸಿಂಧೆ, ಭೀಮಣ್ಣ ಕೊಂಕಣೆ, ರೋಹಿದಾಸ ರಾಠೋಡ, ಮನೋಹರ ಹೊಳಕರ, ಶಿವಕುಮಾರ ಫುಲಾರಿ ಉಪಸ್ಥಿತರಿದ್ದರು.

]]>
https://ghantepatrike.com/%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf%e0%b2%97%e0%b2%b3-%e0%b2%b8%e0%b2%b0%e0%b3%8d%e0%b2%b5%e0%b2%a4%e0%b3%8b%e0%b2%ae%e0%b3%81%e0%b2%96-%e0%b2%ac/feed/ 0 4869
ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ -ಸಚಿವ ಈಶ್ವರ ಬಿ. ಖಂಡ್ರೆ https://ghantepatrike.com/%e0%b2%b0%e0%b2%b8%e0%b3%8d%e0%b2%a4%e0%b3%86%e0%b2%97%e0%b2%b3-%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b3%86-%e0%b2%b9%e0%b3%86%e0%b2%9a%e0%b3%8d/ https://ghantepatrike.com/%e0%b2%b0%e0%b2%b8%e0%b3%8d%e0%b2%a4%e0%b3%86%e0%b2%97%e0%b2%b3-%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b3%86-%e0%b2%b9%e0%b3%86%e0%b2%9a%e0%b3%8d/#respond Mon, 30 Sep 2024 18:27:42 +0000 https://ghantepatrike.com/?p=4864 ಬೀದರ, ಸೆಪ್ಟೆಂಬರ್.30 :- ರಸ್ತೆಗಳು ಚೆನ್ನಾಗಿ ಇದ್ದರೆ ಮಾತ್ರ ನಮ್ಮ ಭಾಗದ ಅಭಿವೃದ್ಧಿಯಾಗುತ್ತದೆ ಹಾಗಾಗಿ ಭಾಲ್ಕಿ ತಾಲ್ಲೂಕಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ಯಾಕೇಜ್ ಸಂಖ್ಯೆ 617 ರ ಅಡಿಯಲ್ಲಿನ ಕಾಮಗಾರಿಗಳ ಅಂದಾಜು 25 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಸೋಮವಾರ ಭಾಲ್ಕಿ ತಾಲ್ಲೂಕಿನ ಲಂಜವಾಡ ಗ್ರಾಮದಲ್ಲಿ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ಯಾಕೇಜ್ ಸಂಖ್ಯೆ 617 ರ ಅಡಿಯಲ್ಲಿನ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಸ್ತೆಗಳು ಚೆನ್ನಾಗಿ ಇಲ್ಲದಿದ್ದರೆ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲು, ಬಾಣಂತಿಯರಿಗೆ ಹೆರಿಗೆ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗಲ್ಲ ಮತ್ತು ಬಹಳಷ್ಟು ಅಪಘಾತಗಳು ಸಂಭವಿಸುತ್ತವೆ. ನಾನು ಶಾಸಕನಾಗಿದ್ದಾಗ ಲಂಜವಾಡ ರಸ್ತೆ ಹೇಗಿತ್ತು ಎಂದರೆ ಗಾಡಿಗಳು ಕೆಳಗೆ ಮೇಲೆ ಅಲುಗಾಡುತ್ತಿದ್ದವು ಯಾವಾಗ ವಾಹನಗಳು ಪಲ್ಟಿಯಾಗುತ್ತದೆ ಎಂದು ಭಯವಾಗುತ್ತಿತ್ತು ಎಂದರು.
ಭಾಲ್ಕಿ-ಚಿAಚೋಳಿ ರಾಜ್ಯ ಹೆದ್ದಾರಿ 75 ರ ಆಯ್ದ ಭಾಗಗಳ ಸುಧಾರಣೆ 869 ಲಕ್ಷ ರೂ ಹಾಗೂ ಔರಾದ-ಸದಾಶಿವಗಡ್ ರಾಜ್ಯ ಹೆದ್ದಾರಿ 34 ರ ಆಯ್ದ ಭಾಗಗಳ ಸುಧಾರಣೆ 511 ಲಕ್ಷ ರೂ ಹಾಗೂ ಬಾಲಗಾಂವ (ಮಹಾರಾಷ್ಟ್ರ ಗಡಿ) ಯಿಂದ ಧರ್ಮಪೂರ (ತೆಲಂಗಾಣ ಗಡಿ) ವರೆಗೆ ರಸ್ತೆ ಸುಧಾರಣೆ 1120 ಲಕ್ಷ ರೂ. ಗಳ ಒಟ್ಟು 25 ಕೋಟಿ ರೂ. ಗಳ ಅಂದಾಜು ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.
ಲಂಜವಾಡ ಗ್ರಾಮದಲ್ಲಿ 81 ಲಕ್ಷದ ಸಿ.ಸಿ ರಸ್ತೆ. ಚರಂಡಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಿದ್ದೆನೆ. ಜಲ ಜೀವನ ಮಿಷನ್ 23 ಲಕ್ಷ ಅಂದಾಜು ವೆಚ್ಚದ ಕಾಮಗಾರಿ ಈಗಾಗಲೇ ಮುಗಿದಿದೆ. ಈ ಗ್ರಾಮಕ್ಕೆ ಪಶು ಚಿಕಿತ್ಸಾಲಯದ ಬೇಡಿಕೆ ಇರುವುದರಿಂದ ಅದನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಲಂಜವಾಡ ಗ್ರಾಮಕ್ಕೆ ನೀರು ಬರುತ್ತವೆ ಅದರ ಕಾರ್ಯಾರಂಭ ಮಾಡಿದ್ದೆನೆ ಎಂದರು.
ಲAಜವಾಡ ಗ್ರಾಮ ಪಂಚಾಯತಿಗೆ ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಅವಶ್ಯಕತೆ ಇದ್ದಲ್ಲಿ ಎಲ್ಲಾ ಕಡೆ ಕೊಡುತ್ತೆವೆ ಜೋಪಡಿ ಮುಕ್ತ ಮಾಡುತ್ತೆವೆ. ಯಾವುದೇ ಪಕ್ಷ ನೋಡದೆ ಎಲ್ಲರಿಗೂ ಮನೆಗಳನ್ನು ಕೊಟ್ಟಿದ್ದೆವೆ. ಭಾಲ್ಕಿ ತಾಲ್ಲೂಕಿನ 120 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿಗೆ ಗುಣಮಟ್ಟದ ಕಾಮಗಾರಿ ಆಗುತ್ತದೆ. ನಾರಾಯಣಪೂರ ಜಲಾಶಯದಿಂದ ಬೀದರ ಜಿಲ್ಲೆಯ 800 ರಿಂದ 900 ಜನವಸತಿ ಪ್ರದೇಶಗಳಿಗೆ ನೀರು ತರಲು ದೂರದರ್ಶಿತ್ವ ಇಟ್ಟುಕೊಳ್ಳಲಾಗಿದೆ. ಅಧಿಕಾರಿಗಳು ಗುಣಾತ್ಮಕ, ಕ್ವಾಲಿಟಿ, ಕ್ವಾಂಟಿಟಿ ಕೆಲಸ ಕಾಮಗಾರಿಗಳನ್ನು ಮಾಡಬೇಕೆಂದು ಹೇಳಿದರು.
ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಹಣಮಂತ್ರಾಯ ಚವ್ಹಾಣ ಮಾತನಾಡಿ, ನಮ್ಮ ಗ್ರಾಮದಲ್ಲಿ ಸಚಿವರು ದೊಡ್ಡ ಮಟ್ಟದ ಕಾಮಗಾರಿಗಳನ್ನು ತಂದು ಉದ್ಘಾಟನೆ ಮಾಡುತ್ತಿದ್ದು. ಸಿ.ಸಿ.ರಸ್ತೆ, ಜಲಜೀವನ ಮಿಷನ್, ಪಶು ಚಿಕಿತ್ಸಾಲಯ ಉದ್ಘಾಟನೆ ನೆರವೇರಿಸಿದ್ದು ಎಲ್ಲಾ ಗ್ರಾಮಸ್ಥರ ಪರವಾಗಿ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಲಂಜವಾಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಧಿಕಾ ಶುಕ್ರಚಾರ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ಪಶು ಇಲಾಖೆಯ ಉಪನಿರ್ದೆಶಕರಾದ ನರಸಪ್ಪ, ಭಾಲ್ಕಿ ತಹಶೀಲ್ದಾರ ಮಲ್ಲಿಕಾರ್ಜುನ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಲಂಜವಾಡ ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು. ]]>
https://ghantepatrike.com/%e0%b2%b0%e0%b2%b8%e0%b3%8d%e0%b2%a4%e0%b3%86%e0%b2%97%e0%b2%b3-%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b3%86-%e0%b2%b9%e0%b3%86%e0%b2%9a%e0%b3%8d/feed/ 0 4864
ಲಂಡನ್‌ ನಲ್ಲಿ ಕನ್ನಡ ಕಲರವ ಮೂಡಿಸಿದ ಬೀದರ್‌ ಯುವಕ ಭಾಷಣದಲ್ಲಿ  ಬಸವಣ್ಣನವರ ವಚನ ಪಠಿಸಿ ಮಾದರಿ https://ghantepatrike.com/%e0%b2%b2%e0%b2%82%e0%b2%a1%e0%b2%a8%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b2%e0%b2%b0%e0%b2%b5-%e0%b2%ae/ https://ghantepatrike.com/%e0%b2%b2%e0%b2%82%e0%b2%a1%e0%b2%a8%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b2%e0%b2%b0%e0%b2%b5-%e0%b2%ae/#respond Mon, 30 Sep 2024 18:20:08 +0000 https://ghantepatrike.com/?p=4860 ಲಂಡನ್, ಯುಕೆ – ಲಂಡನ್ ಯೂತ್ ಕೌನ್ಸಿಲ್ ನ ಮೊದಲ ಭಾರತೀಯ ಸದಸ್ಯರಾದ ಅಧೀಶ್ ರಜಿನೀಶ್ ವಾಲಿ ಅವರು, ಲಂಡನ್ ಸಂಸತ್ತಿನಲ್ಲಿ ತಮ್ಮ ಪ್ರಥಮ ಭಾಷಣದಲ್ಲಿ  ಮಾತೃ ಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಸಂಸತ್ತಿನ ಎಲ್ಲ ಸದಸ್ಯರ ಗಮನಸೆಳೆದರು. ತಮ್ಮ ಭಾಷಣವನ್ನು 12ನೇ ಶತಮಾನದ ತತ್ವಜ್ಞಾನಿ, ಸಾಮಾಜಿಕ ಸುಧಾರಕ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳನ್ನು ಹೇಳುವ ಮೂಲಕ ಪ್ರಾರಂಭಿಸಿ, ಪ್ರಾಚೀನ ಜ್ಞಾನ ಮತ್ತು ಇಂದಿನ ತಾತ್ಕಾಲಿಕ ಸಮಸ್ಯೆವಾದ ಹವಾಮಾನದಿಂದಾಗುತ್ತಿರುವ ವಲಸೆಗಳ ಬಗ್ಗೆ ಮಾತನಾಡಿದರು.

“ಹವಾಮಾನ ವಲಸೆ – ಯುಕೆ ಸರ್ಕಾರದ ನೀತಿ” ಎಂಬ ವಿಷಯದ ಮೇಲೆ ತಮ್ಮ ಪ್ರಸ್ತುತಿಯನ್ನು ಮಾಡುತ್ತಾ, ರಾಜಕೀಯ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಪ್ರತಿನಿಧಿಗಳು ಮತ್ತು ಸರ್ಕಾರದ ಅಧಿಕಾರಿಗಳನ್ನೊಳಗೊಂಡ ಗಣ್ಯರ ಬಳಗವನ್ನುದ್ದೇಶಿಸಿ ಮಾತನಾಡಿದರು.

ಹವಾಮಾನ ಬದಲಾವಣೆಯಿಂದಾಗಿ ಪ್ರೇರಿತವಾದ ವಲಸೆ ಸಮಸ್ಯೆಯ ಬಗ್ಗೆ ವಿವರಿಸಿದರು ಮತ್ತು ವಲಸೆ ಸಮುದಾಯಗಳನ್ನು ಒಪ್ಪಿಕೊಳ್ಳುವ ನೀತಿಗಳನ್ನು ರೂಪಿಸುವ ಅವಶ್ಯಕತೆಯಿದೆ ಇದೆ ಎಂದು ಹೇಳಿದರು.

ಬಸವಣ್ಣನವರ ವಚನಗಳು ಸರ್ವ  ಕಾಲೀನ ಪರಿಸ್ಥಿತಿಯ ಸಂಕೇತಾತ್ಮಕ ಸಂಬಂಧವನ್ನು ತೋರಿಸುತ್ತವೆ ಮತ್ತು ಇಂದಿನ ಈ ಸವಾಲಿನ ಪರಿಹಾರಕ್ಕಾಗಿ ಸಮಾನತೆ ಮತ್ತು ಸಹಾನುಭೂತಿ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳುತ್ತವೆ. ಬಸವಣ್ಣನವರ ವಿಚಾರಗಳು ಸಮಾನತೆಯನ್ನು ಪ್ರೋತ್ಸಾಹಿಸಿದಂತೆ, ಹವಾಮಾನ ಬದಲಾವಣೆಯಿಂದ ಪ್ರತಿಕೂಲತೆಯನ್ನು ಅನುಭವಿಸುತ್ತಿರುವವರಿಗೆ ಸಹಾಯ ಮಾಡಲು ಆಧುನಿಕ ಸಮಾಜವು ಮುಂದಾಗಬೇಕೆಂದು ಸೂಚಿಸಿದರು.

ಇದನ್ನು ಲಂಡನ್ ಯುವ ಸಮಿತಿ ಯುಕೆ ಸಂಸತ್ತಿಗೆ ನೀಡಿದ ಶಿಫಾರಸುಗಳಲ್ಲಿ ಭಾಗವಾಗಿಸಿ, ಹವಾಮಾನ ವಲಸೆ ಕುರಿತಂತೆ ನವೀಕರಿತ ನೀತಿಗಳನ್ನು ರೂಪಿಸುವ ಆವಶ್ಯಕತೆಯನ್ನು ತಿಳಿಸಿದರು. ಯುವ ಸಮಿತಿಯ ಮೊದಲ ಭಾರತೀಯ ಸದಸ್ಯರಾಗಿರುವ ಆದೀಶ್ ರಜನೀಶ್ ವಾಲಿಯವರ ಪಾತ್ರವು ಜಾಗತಿಕ ಸಮಸ್ಯೆಗಳ ಕುರಿತಂತೆ ಯುಕೆ ನೀತಿಯನ್ನು ರೂಪಿಸುವಲ್ಲಿ ವಿಭಿನ್ನ ಸ್ವರಗಳ ಪ್ರಭಾವವನ್ನು ತೋರಿಸುತ್ತದೆ.

ಲಂಡನ್ ಯುವ ಸಮಿತಿಯಲ್ಲಿರುವುದರ ಜೊತೆಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಯುನೈಟೆಡ್ ಕಿಂಗ್ಡಮ್ ಗೌರವಯುತ ಯುವ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಆದೀಶ್ ವಾಲಿಯವರು ತಮ್ಮ ಪರಂಪರೆಯ ಜೊತೆಗೆ ಭವಿಷ್ಯದ ಸಮಾನತೆಗಾಗಿ ಹೋರಾಟ ಮಾಡುವ ತಮ್ಮ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿದ್ದಾರೆ.

Adish wali x.com social media handle

https://x.com/AdhishWali/status/1840015439679873481

]]>
https://ghantepatrike.com/%e0%b2%b2%e0%b2%82%e0%b2%a1%e0%b2%a8%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b2%e0%b2%b0%e0%b2%b5-%e0%b2%ae/feed/ 0 4860
ರಾಷ್ಟ್ರದ ಹೀತಗೋಸ್ಕರ ಭೂತಾಯಿಯ ರಕ್ಷಣೆಗೋಸ್ಕರ ಯಾವ ತ್ಯಾಗಕ್ಕೂ ಯುವಕರು ಸಿದ್ಧರಾಗಬೇಕಾಗಿದೆ : ಪರಮ ಪೂಜ್ಯ ಶ್ರೀ ಹಾವಗಿಲಿಂಗಶಿವಾಚಾರ್ಯರು https://ghantepatrike.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%a6-%e0%b2%b9%e0%b3%80%e0%b2%a4%e0%b2%97%e0%b3%8b%e0%b2%b8%e0%b3%8d%e0%b2%95%e0%b2%b0-%e0%b2%ad%e0%b3%82%e0%b2%a4%e0%b2%be%e0%b2%af/ https://ghantepatrike.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%a6-%e0%b2%b9%e0%b3%80%e0%b2%a4%e0%b2%97%e0%b3%8b%e0%b2%b8%e0%b3%8d%e0%b2%95%e0%b2%b0-%e0%b2%ad%e0%b3%82%e0%b2%a4%e0%b2%be%e0%b2%af/#respond Mon, 30 Sep 2024 18:19:00 +0000 https://ghantepatrike.com/?p=4857 ಬೀದರ : ಸೆ.30:ಅಪ್ಪಟ ದೇಶ ಭಕ್ತ ಕ್ರಾಂತಿಕಾರಿ ಭಗತಸಿಂಗರಂತೆ ಮಾತೃಭೂಮಿಗಾಗಿ ದೇಶಭಕ್ತಿ ಹೊಂದಿ ರಾಷ್ಟ್ರ ಪ್ರೇಮದಿಂದ ರಾಷ್ಟ್ರಿಯ ಮನೋಭಾವನೆ ತಾಳಿ, ಭಾರತೀಯರಾಗಿ ರಾಷ್ಟ್ರದ ಹೀತಗೋಸ್ಕರ ಭೂತಾಯಿಯ ರಕ್ಷಣೆಗೋಸ್ಕರ ಯಾವ ತ್ಯಾಗಕ್ಕೂ ಯುವಕರು ಸಿದ್ಧರಾಗಬೇಕಾಗಿದೆ ಎಂದು ಹಲಬರ್ಗಾ ರಾಚೋಟೇಶ್ವರ ವಿರಕ್ತ ಮಠದ ಪರಮ ಪೂಜ್ಯ ಶ್ರೀ ಹಾವಗಿಲಿಂಗ ಶಿವಾಚಾರ್ಯರರು ಕರೆ ನೀಡಿದರು.

ಬೀದರ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಏರ್ಪಡಿಸಿದ ಕ್ರಾಂತಿಕಾರಿ ಭಗತಸಿಂಗ್ ಅವರ 117ನೇ ಜಯಂತಿ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ಜಾನಪದ ಅಕಾಡೇಮಿ ಸದಸ್ಯರಾದ ವಿಜಯಕುಮಾರ ಸೋನಾರೆ ಅವರು ಮಾತನಾಡಿ, ಲಾಡಗೇರಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರು ಮಾತೃಹೃದಯಿಯಾಗಿದ್ದಾರೆ. ಸರ್ವರನ್ನು ಸಮನಾಗಿ ಕಾಣುವ ಜಾತಿ ಭೇದವೆನ್ನದೇ ಎಲ್ಲರನ್ನು ತಮ್ಮವರೆನ್ನುವ ಭಾವ ಹೊಂದಿರುವ ಇವರು ಶ್ರೀ ಮಠದಲ್ಲಿ ನಾಟಕ ಕಲಾವಿರಿಗೆ ಕರೆಸಿ ಅವರಿಂದ ತಾಯಿಗೆ ತಕ್ಕ ಮಗ ಎಂಬ ಸುಂದರ ಸಮಾಜೀಕ ನಾಟಕ ಪ್ರದರ್ಶನ ಮಾಡಿಸಿ ನಾಟಕ ಕಂಪನಿ ಮಾಲಿಕ ಬಸವರಾಜ ಅವರಿಗೆ ಶ್ರೀ ಮಠದಿಂದ 50 ಸಾವಿರ ರೂಪಾಯಿ ಆಶಿರ್ವಾದ ರೂಪದಲ್ಲಿ ನೀಡಿ ಕಲಾ ಪೆÇಷಕರಾಗಿ ಮಾನವೀಯತೆ ಮೆರೆದಿದ್ದಾರೆ ಎಂದು ಕೊಂಡಾಡಿದರು.

ಬಿಜೆಪಿ ಮುಖಂಡ ನಾಗರಾಜ ಕರ್ಪೂರ ಅವರು ಮಾತನಾಡಿ ದೇಶಭಕ್ತ ಭಗತಸಿಂಗ್ ಅವರು ಬಾಲ್ಯದಿಂದಲೇ ದೇಶಭಕ್ತಿ, ದೇಶಪ್ರೇಮ ಮೈಗೂಡಿಸಿಕೊಂಡಿದ್ದ ಅವರು ಬ್ರಿಟಿಷರ ಕಪಿ ಮುಷ್ಠಿಯಿಂದ ಮಾತೃಭೂಮಿ ಭಾರತ ಮಾತೆಯ ವಿಮೋಚನೆಗಾಗಿ ಕಠಿಣ ಸಂಘರ್ಷ ಮಾಡಿದ್ದರು. ಬ್ರಿಟೀಷ ಅಧಿಕಾರಿ ಮತ್ತು ಸೈನಿಕರ ವಿರುದ್ಧ ತಮ್ಮ ಬೆಂಬಲಿಗರಾದ ಸುಖದೇವ ರಾಜಗುರು ಅವರೊಡಗೂಡಿ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಅವರ ಆದರ್ಶ ಜೀವನ ಇಂದಿನ ಯುವ ಪಿಳಿಗೆಗೆ ಮಾರ್ಗದರ್ಶನವಾಗಿದೆ ಎಂದರು.

ಜೈ ಭಾರತ ಸೇವಾ ಸಮಿತಿ ನವ ದೆಹಲಿ (ರಿ) ರಾಷ್ಟ್ರಿಯ ಸಂಸ್ಥಾಪಕ ಅಧ್ಯಕ್ಷರು ನಿರಂತರ ಅನ್ನದಾಸೋಹಿಗೆ ಪ್ರಸಿದ್ದಿ ಪಡೆದಿರುವ ಪರಮ ಪೂಜ್ಯ ಶ್ರೀ ನಿರಗುಡಿ ಹವಾ ಮಲ್ಲಿನಾಥ ಮಹಾರಾಜ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಾಡಗೇರಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ವೈಷ್ಣೋದೇವಿ ಆರಾಧಕರಾದ ಪೂಜ್ಯ ಶ್ರಿ ಅಮೃತರಾವ್, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸುನೀಲ ಭಾವಿಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಕಾಂತ ಅಷ್ಟೂರ್, ಮಲ್ಲಪ್ಪ ಹುಲೇಪ್ಪನೋರ್, ಶಿವರಾಜ ಅಷ್ಟೂರ್, ಕಂಟೇಪ್ಪಾ ಪಾಟೀಲ್ ಹಳ್ಳದಕೇರಿ, ಸೋಮಶೇಖರ್ ನಿಲಪ್ಪನೋರ್, ಮಹಾರುದ್ರಪ್ಪಾ ಚಿಕ್ಲೆ, ಅಶೋಕ ಹಳ್ಳದಕೇರಿ, ಪಪ್ಪು ಪಾಟೀಲ್ ಖಾನಾಪೂರ್, ಮಾಣಿಕ ಮೇತ್ರೆ, ಶ್ರೀಮಂತ ಸಪಾಟೆ, ಮಾರುತಿ ಮೇತ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿರುಪಾಕ್ಷಯ್ಯಾ ಸ್ವಾಮಿ ಸ್ವಾಗತಿಸಿದರು, ಸಿದ್ರಾಮಯ್ಯಾ ಸ್ವಾಮಿ ನೀರೂಪಿಸಿದರೇ, ದೀಪಕ್ ಥಮಕೆ ವಂದಿಸಿದರು.

]]>
https://ghantepatrike.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%a6-%e0%b2%b9%e0%b3%80%e0%b2%a4%e0%b2%97%e0%b3%8b%e0%b2%b8%e0%b3%8d%e0%b2%95%e0%b2%b0-%e0%b2%ad%e0%b3%82%e0%b2%a4%e0%b2%be%e0%b2%af/feed/ 0 4857
ರೈಲ್ವೆ ಪಾಸ್ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಲು ಸಂಸದ ಸಾಗರ ಖಂಡ್ರೆಯವರಿಗೆ ಮನವಿ ಪತ್ರ ಸಲ್ಲಿಕೆ https://ghantepatrike.com/%e0%b2%b0%e0%b3%88%e0%b2%b2%e0%b3%8d%e0%b2%b5%e0%b3%86-%e0%b2%aa%e0%b2%be%e0%b2%b8%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0/ https://ghantepatrike.com/%e0%b2%b0%e0%b3%88%e0%b2%b2%e0%b3%8d%e0%b2%b5%e0%b3%86-%e0%b2%aa%e0%b2%be%e0%b2%b8%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0/#respond Mon, 30 Sep 2024 18:13:39 +0000 https://ghantepatrike.com/?p=4854 ಬೀದರ,ಸೆ.30:- ಬೀದರನಲ್ಲಿ ಇಂದು ಸಂಸದ ಸಾಗರ ಖಂಡ್ರೆಯವರಿಗೆ ಭೇಟಿ ಮಾಡಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೀದರ ಜಿಲ್ಲಾ ಘಟಕದ ವತಿಯಿಂದ ಕೋವಿಡ್-19ರ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಪತ್ರಕರ್ತರ ರಿಯಾಯಿತಿ ಪಾಸ್ ಮರು ಚಾಲನೆಗೆ ಕೇಂದ್ರ ರೈಲ್ವೆ ಸಚಿವರನ್ನು ಗಮನ ಸೆಳೆಯುವಂತೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸಾಗರ ಖಂಡ್ರೆಯವರು ಈ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಲಾಗುವುದು ಹಾಗೂ ಮುಂಬರುವ ಚಳಿಗಾಲ ಲೋಕಸಭೆ ಅಧಿವೇಶನದಲ್ಲಿ ಪ್ರಶ್ನೆ ಎತ್ತುವುದಾಗಿ ಅವರು ಭರವಸೆ ನೀಡಿದರು. ಮೊದಲಿನಿಂದಲೂ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ ಪಾಸ್ ನೀಡಲಾಗಿತ್ತು. ಕೋವಿಡ್-19ರ ಸಂದರ್ಭದಲ್ಲಿ ಪತ್ರಕರ್ತರಿಗೆ ಆರೋಗ್ಯದ ದೃಷ್ಠಯಿಂದ ರಿಯಾಯಿತಿ ಪಾಸ್ ಸ್ಥಗಿತಗೊಳಿಸಲಾಗಿತ್ತು. ಇದನ್ನು ಪುನರರಾಂಭಿಸುವAತೆ ಸಂಸದರಿಗೆ ನೀಡಿದ ಮನವಿ ಪತ್ರದಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ(ರಿ) ಬೆಂಗಳೂರು ಬೀದರ ಜಿಲ್ಲಾ ಅಧ್ಯಕ್ಷರಾದ ಈ ಸೂರ್ಯಾಸ್ತ ಪತ್ರಿಕೆಯ ಸಂಪಾದಕರಾದ ವಿಜಯಕುಮಾರ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಯುವರಂಗ ಪತ್ರಿಕೆಯ ಸಂಪಾದಕ ಶಶಿಕುಮಾರ ಪಾಟೀಲ, ಕಾಜಿ ಅಲಿಯೋದ್ದೀನ್, ಮಾಳಪ್ಪ ಅಡಸಾರೆ, ಹಸನ್ ಸೈಯದ್ ಖಾದ್ರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೀದರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಸಂಸದರಿಗೆ ಜೊತೆಗೆ ಇದ್ದರು.

]]>
https://ghantepatrike.com/%e0%b2%b0%e0%b3%88%e0%b2%b2%e0%b3%8d%e0%b2%b5%e0%b3%86-%e0%b2%aa%e0%b2%be%e0%b2%b8%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0/feed/ 0 4854
ಟೆಂಡರ್ ಜಾಹಿರಾತು ವಾರ್ತಾ ಇಲಾಖೆಯ ಮುಖಾಂತರ ನೀಡಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ. https://ghantepatrike.com/%e0%b2%9f%e0%b3%86%e0%b2%82%e0%b2%a1%e0%b2%b0%e0%b3%8d-%e0%b2%9c%e0%b2%be%e0%b2%b9%e0%b2%bf%e0%b2%b0%e0%b2%be%e0%b2%a4%e0%b3%81-%e0%b2%b5%e0%b2%be%e0%b2%b0%e0%b3%8d%e0%b2%a4%e0%b2%be-%e0%b2%87/ https://ghantepatrike.com/%e0%b2%9f%e0%b3%86%e0%b2%82%e0%b2%a1%e0%b2%b0%e0%b3%8d-%e0%b2%9c%e0%b2%be%e0%b2%b9%e0%b2%bf%e0%b2%b0%e0%b2%be%e0%b2%a4%e0%b3%81-%e0%b2%b5%e0%b2%be%e0%b2%b0%e0%b3%8d%e0%b2%a4%e0%b2%be-%e0%b2%87/#respond Mon, 30 Sep 2024 18:06:38 +0000 https://ghantepatrike.com/?p=4851  ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಅವರನ್ನು ಭೇಟಿ ಮಾಡಿದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಅಡಿಯಲ್ಲಿ ಮನವಿ ಪತ್ರ ನೀಡಿ 19-01-2017ರ ಸರ್ಕಾರದ ತಿದ್ದುಪಡಿ ಆದೇಶದ ಪ್ರಕಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಮಗಾರಿಗಳ ಟೆಂಡರ್ ಪ್ರಕಟಣೆಯನ್ನು ಕಡ್ಡಾಯವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಇವರ ಮುಖಾಂತರವೇ ಬಿಡುಗಡೆಗೊಳಿಸಲು ಸುತ್ತೋಲೆ ಹೊರಡಿಸುವಚಿತ ಮನವಿ ಪತ್ರದಲ್ಲಿ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳು ಮಾತನಾಡಿದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರು ಹಾಜರಿದ್ದರು. ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ(ರಿ) ಬೆಂಗಳೂರು ಬೀದರ ಜಿಲ್ಲಾ ಅಧ್ಯಕ್ಷರಾದ ಈ ಸೂರ್ಯಾಸ್ತ ಪತ್ರಿಕೆಯ ಸಂಪಾದಕರಾದ ವಿಜಯಕುಮಾರ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಯುವರಂಗ ಪತ್ರಿಕೆಯ ಸಂಪಾದಕ ಶಶಿಕುಮಾರ ಪಾಟೀಲ, ಕಾಜಿ ಅಲಿಯೋದ್ದೀನ್, ಮಾಳಪ್ಪ ಅಡಸಾರೆ, ಹಸನ್ ಸೈಯದ್ ಖಾದ್ರಿ ಉಪಸ್ಥಿತರಿದ್ದರು.

]]>
https://ghantepatrike.com/%e0%b2%9f%e0%b3%86%e0%b2%82%e0%b2%a1%e0%b2%b0%e0%b3%8d-%e0%b2%9c%e0%b2%be%e0%b2%b9%e0%b2%bf%e0%b2%b0%e0%b2%be%e0%b2%a4%e0%b3%81-%e0%b2%b5%e0%b2%be%e0%b2%b0%e0%b3%8d%e0%b2%a4%e0%b2%be-%e0%b2%87/feed/ 0 4851
ರಾಷ್ಟ್ರೀಯ ಮಾಧ್ಯಮ‌ ಸಮ್ಮೇಳನ ಬೀದರ್ ಜಿಲ್ಲೆಯ 15 ಜನ ಪತ್ರಕರ್ತರನ್ನು ವೇದಿಕೆಗೆ ಕರೆಸಿ ಗೌರವ https://ghantepatrike.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae-%e0%b2%b8%e0%b2%ae%e0%b3%8d%e0%b2%ae%e0%b3%87%e0%b2%b3/ https://ghantepatrike.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae-%e0%b2%b8%e0%b2%ae%e0%b3%8d%e0%b2%ae%e0%b3%87%e0%b2%b3/#respond Fri, 27 Sep 2024 09:18:55 +0000 https://ghantepatrike.com/?p=4841 ರಾಜಸ್ಥಾನ ರಾಜ್ಯದ ಶಿರೊಯಿ ಜಿಲ್ಲೆಯಲ್ಲಿರುವ ಹಿಮಾಲಯ ಪರ್ವತದ ಬಳಿಕ ಭಾರತದ ಅತ್ಯಂತ ಎತ್ತರದ ಪರ್ವತವಾದ ಅರಾವಳಿ ಪರ್ವತದ ತಪ್ಪಲಿನಲ್ಲಿರುವ ಆನಂದ ಸರೋವರದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯದ ಪ್ರಧಾನ ಕೇಂದ್ರವಾದ ಮೌಂಟ್ ಅಬುದಲ್ಲಿ ಗುರುವಾರ ರಾಷ್ಟ್ರೀಯ ಮಾಧ್ಯಮ‌ ಸಮ್ಮೇಳನದ ಮೊದಲ ದಿನದಂದು ದೇಶದ ಹಾಗೂ ನೇಪಾಳದ ಪತ್ರಕರ್ತರನ್ನು ವೇದಿಕೆ ಕರೆದ ಹಾಗೆ ಕರ್ನಾಟಕದ ಕೀರಿಟಪ್ರಾಯ ಗಡಿ ಜಿಲ್ಲೆ ಬೀದರ್ ಜಿಲ್ಲೆಯಿಂದ ಸಮ್ಮೇಲನಕ್ಕೆ ಆಗಮಿಸಿದ 15 ಜನ ಪತ್ರಕರ್ತರನ್ನು ವೇದಿಕೆಗೆ ಕರೆಸಿ ಕಾಣಿಕೆ ರೂಪದಲ್ಲಿ ಬ್ರಹ್ಮಾಕುಮಾರಿಸ್ ಬ್ಯಾಗ್, ವಿಷ್ಣು-ಲಕ್ಷ್ಮೀ ಫೋಟೊ ಅಥವಾ ಓಂ ಶಾಂತಿ ಡೈರಿ ಹಾಗೂ ಪೆನ್ ಜೊತೆಗೆ ಕೊಬ್ಬರಿ ಮಿಶ್ರಿತ ಮಿಠಾಯಿ ಮಿಶ್ರಿತ ಪ್ರಸಾದ ನೀಡಿ ಗೌರವಿಸಿದರು. ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಫ್ರಧಾನ‌ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಸಂಘದ ಕಮಲನಗರ ತಾಲೂಕಾಧ್ಯಕ್ಷ ಗಣಪತಿ ಕರ್ನುಳೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶರದ ಘಂಟೆ, ಸಂತೋಷ ಚಟ್ಡಿ, ಭಾರತೀಯ ಕರ್ಯನಿರತ ಪತ್ರಕರ್ತರ ಒಕ್ಕೂದದ ಸದಸ್ಯ ದೀಪಕ ಮನ್ನಳ್ಳಿ, ಕಕಾಪಸಂ ಇತರೆ ಸದಸ್ಯರಾದ ಅಮರೇಶ ಚಿದ್ರೆ, ಚಂದ್ರಕಾಂತ ಗಳಗೆ, ಭವರಾವ ಹೇಡೆ, ವಿಜಯಕುಮಾರ ಅಷ್ಟುರೆ, ಮಾಧು ಬರ್ಗೆ, ನಅಮರ ಸ್ವಾಮಿ ಸ್ತಾವರಮಠ, ರಾಜಸೇಖರ ಅಜ್ಜಾ, ಬಾಲಾಜಿ ಫಿರಂಗೆ, ಪರಮೇಶ ರಾಂಪುರೆ,ಸವಿತಾ ಅಜ್ಜಾ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಕಾಣಿಕೆ ಹಾಗೂ ಪ್ರಸಾದ ಸ್ವೀಕರಿಸಿದರು.

]]>
https://ghantepatrike.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae-%e0%b2%b8%e0%b2%ae%e0%b3%8d%e0%b2%ae%e0%b3%87%e0%b2%b3/feed/ 0 4841